ಸರಕಾರಿ ಶಾಲೆಗಳಲ್ಲಿ ಶೌಚಾಲಯ ಕೊರತೆ ನೀಗಿಸಿ
ಮಾನ್ಯರೆ,
ಸ್ವಚ್ಛಭಾರತ ಎಂಬ ಘೋಷಣೆ ಕೂಗುತ್ತ ಎರಡು ವರ್ಷ ಕಳೆದವು. ಆದರೆ ದೇಶದ ಹೆಚ್ಚಿನ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಈ ಘೋಷಣೆಗೆ ಬಲಬಂದಂತಿಲ್ಲ. ಉದಾಹರಣೆಗೆ ನಮ್ಮ ಕರ್ನಾಟಕದ ಕೊಪ್ಪಳ ಜಿಲ್ಲೆಯ ಸುತ್ತಮುತ್ತಲಿರುವ ಕೆಲವು ಹಳ್ಳಿಗಳಲ್ಲಿ ಶೌಚಾಲಯಗಳ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ಅದರಲ್ಲಿಯೂ ನಮ್ಮ ಸರಕಾರಿ ಶಾಲೆಗಳಲ್ಲಿಯೇ ಇಲ್ಲದಿರುವುದು ನಾಚಿಕೆಯ ವಿಷಯ. ಶಾಲೆಗೆ ಹೋಗುವ ಮಕ್ಕಳಿಗೆ ಮೊದಲು ಶೌಚಾಲಯ ಆವಶ್ಯಕವಾಗಿ ಬೇಕೆಬೇಕು. ಒಂದು ಮನೆಗೆ ಶೌಚಾಲಯವಿಲ್ಲದಿದ್ದಾಗ ತೊಂದರೆ ಅನುಭವಿಸುವ ವ್ಯವಸ್ಥೆಯಲ್ಲಿ ಸಾವಿರಾರು ಮಕ್ಕಳು ಇರುವ ಶಾಲೆಗಳಲ್ಲಿ ಶೌಚಾಲಯವಿಲ್ಲದಿದ್ದಾಗ ಎಷ್ಟೊಂದು ತೊಂದರೆಗಳನ್ನ ಅವರು ಎದುರಿಸಬೇಕಾಗುತ್ತದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಆದಷ್ಟು ಬೇಗನೆ ಹಳ್ಳಿಗಳಲ್ಲಿರುವ ಸರಕಾರಿ ಶಾಲೆಗಳಿಗೆ ಶೌಚಾಲಯಗಳನ್ನು ನಿರ್ಮಿಸಿ ಕೊಡಬೇಕು. ಸ್ವಚ್ಛತೆಯನ್ನು ಕಾಪಾಡುವಲ್ಲಿ ಒಂದು ಹೆಜ್ಜೆ ಮುಂದೆ ಹಾಕಿ, ಹಳ್ಳಿಗಳು ಮಾದರಿ ಹಳ್ಳಿಗಳಾಗಬೇಕು.
-ಲಕ್ಷ್ಮೀದೇವಿ ಇಟಗಿ ಹಿಟ್ನಾಳ್, ಕೊಪ್ಪಳ