ಲಂಚಕೊಟ್ಟು ಪಡೆದ ಪದವಿಯ ರದ್ದತಿ ಅಸಾಧ್ಯ: ಮುಂಬೈ ಹೈಕೋರ್ಟು

Update: 2016-10-06 06:21 GMT

ಮುಂಬೈ,ಅ.6: ಅಕ್ರಮ ವಿಧಾನದಿಂದ ಗಳಿಸಿದ ಪದವಿಯನ್ನು ವಾಪಾಸು ತೆಗೆದುಕೊಳ್ಳಬೇಕೆಂದು ಮುಂಬೈ ವಿಶ್ವವಿದ್ಯಾನಿಲಯಕ್ಕೆ ಆದೇಶಿಸಬೇಕೆಂದು ವಿನಂತಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟು ತಳ್ಳಿಹಾಕಿದೆ ಎಂದು ವರದಿಯಾಗಿದೆ.

2011 ಮೇಯಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿದ್ದ ವೈಭವ್ ಪಾಟೀಲ್(26) ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟು ತಿರಸ್ಕರಿಸಿದ್ದು, ವಿಶ್ವವಿದ್ಯಾನಿಲಯ ನಿಯಮದಲ್ಲಿ ಪದವಿಯನ್ನು ವಾಪಾಸು ಪಡೆಯುವ ವಿಧಾನವಿಲ್ಲ ಎಂದು ಜಸ್ಟಿಸ್ ಶಾಂತನು ಕೆಂಕಾರ್, ಎಂಎಸ್ ಕಾರ್ನಿಕ್‌ರಿದ್ದ ದ್ವಿಸದಸ್ಯೀಯ ಪೀಠ ಅರ್ಜಿ ಅಸ್ವೀಕಾರಗೊಂಡಿರುವುದಕ್ಕೆ ಕಾರಣವನ್ನು ತಿಳಿಸಿದೆ.

ತಾನು ಪ್ರಥಮ ವರ್ಷ ಒಂದು ವಿಷಯದಲ್ಲಿ ಲಂಚ ಕೊಟ್ಟು ಪಾಸಾಗಿದ್ದೇನೆ ಎಂದು ಪಾಟೀಲ್ ಅರ್ಜಿಯಲ್ಲಿ ತಿಳಿಸಿದ್ದರು. ಅರ್ಜಿದಾರನಿಗೆ ಹೆಚ್ಚು ಕಷ್ಟ ಎದುರಾಗದಿರಲಿಕ್ಕಾಗಿ ಅರ್ಜಿಯನ್ನು ತಳ್ಳಿಹಾಕಲಾಯಿತೆಂದು ವಕೀಲರ ಪೀಠ ಹೇಳಿದೆ. ತನ್ನ ಭವಿಷ್ಯವನ್ನು ರಕ್ಷಿಸಲಿಕ್ಕಾಗಿ ಅಂದು ಲಂಚಕೊಟ್ಟು ಪಾಸಾಗಿದ್ದೆ ಎಂದು ಪಾಟೀಲ್ ತಿಳಿಸಿದ್ದರು.ಆದ್ದರಿಂದ ತನ್ನನ್ನುಪಾಪ ಪ್ರಜ್ಞೆ ಕಾಡುತ್ತಿದೆ ಎಂದು ಅವರು ಮನವಿಮಾಡಿಕೊಂಡಿದ್ದರು. ಕೋರ್ಟಿನ ತೀರ್ಪು ನಿರಾಶಾದಾಯಕವಾಗಿದೆ. ಪದವಿ ಮರಳಿಸಲಿಕ್ಕಾಗಿ ತಾನು ಇನ್ನು ಕೂಡಾ ಕಾನೂನು ಕ್ರಮಗಳನ್ನು ಮುಂದುವರಿಸುವೆ ಎಂದು ಪಾಟೀಲ್ ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News