ಬಿಜೆಪಿ,ಕೇಂದ್ರ ಸರಕಾರದ ಬೆದರಿಕೆಗಳನ್ನು ಮೀರಿ ದಲಿತ ಹೋರಾಟವನ್ನು ಬಲಪಡಿಸುವೆ: ರಾಧಿಕಾ ವೇಮುಲಾ

Update: 2016-10-06 07:09 GMT

 ತಲಶ್ಶೇರಿ, ಅ.6: ಬಿಜೆಪಿ ಈಗಲೂ ನಮ್ಮನ್ನು ಬೇಟೆಯಾಡುತ್ತಿದೆ ಅದ್ದರಿಂದ ಹೆಚ್ಚು ಹೆದರಿಕೆಯಿಂದಲೇ ಜೀವಿಸುತ್ತಿದ್ದೇವೆ ಎಂದು ಹೈದರಾಬಾದ್ ವಿಶ್ವವಿದ್ಯಾನಿಲಯದ ಕಿರುಕುಳದಿಂದಾಗಿ ಆತ್ಮಹತ್ಯೆ ನಡೆಸಿದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾರ ತಾಯಿ ರಾಧಿಕಾ ವೇಮುಲಾ ಹೇಳಿದ್ದಾರೆ. ಬಿಜೆಪಿ ಮತ್ತು ಕೇಂದ್ರಸರಕಾರದ ಬೆದರಿಕೆಯನ್ನು ಮೀರಿ ಅವರ ವಿರುದ್ಧ ವಿರುವ ದಲಿತ ಹೋರಾಟವನ್ನು ಬಲಪಡಿಸುವೆ ಎಂದು ಅವರು ತನ್ನ ನಿರ್ಧಾರವನ್ನು ಪ್ರಕಟಿಸಿರುವುದಾಗಿ ವರದಿಯಾಗಿದೆ.

 ಸಿಪಿಐಯ ನವೋತ್ಥಾನ ಸಭೆಯಲ್ಲಿ ಭಾಗವಹಿಸಲು ತಲಶ್ಶೇರಿಗೆ ಬಂದಿದ್ದ ರಾಧಿಕಾ ವೇಮುಲಾ ಪತ್ರಕರ್ತರೊಂದಿಗೆ ಮಾತಾಡುತ್ತಿದ್ದರು. ಗುಜರಾತ್‌ನ ಉನಾದಲ್ಲಿ ದಲಿತ ಪ್ರತಿಭಟನೆಯಲ್ಲಿ ಭಾಗವಹಿಸಿ ಮರಳಿ ಬರುತ್ತಿದ್ದಾಗ ನಾವು ಪ್ರಯಾಣಿಸುತ್ತಿದ್ದ ಕಾರಿಗೆ ಬಿಜೆಪಿ ದಾಳಿ ನಡೆಸಿತ್ತು. ಈಗಲೂ ಬೆದರಿಕೆ ಕರೆಗಳು ಬರುತ್ತಿವೆ. ನಮ್ಮ ನಿಲುವಿನ ಕಾರಣದಿಂದ ನರೇಂದ್ರ ಮೋದಿ ಸರಕಾರಕ್ಕೆ ಏನಾದರೂ ತೊಂದರೆ ಆದರೆ ಕೊಲ್ಲುವುದಾಗಿ ಬೆದರಿಕೆ ಹಲವು ಬಾರಿಬಂದಿದೆ. ಸಾಯಬೇಕಾಗಿ ಬಂದರೂ ದಲಿತ ಹೋರಾಟದಲ್ಲಿ ಮುಂದೆ ಸಾಗುವೆ ಇದಕ್ಕಾಗಿ ಬಿಜೆಪಿ ಹೊರತಾದ ಎಲ್ಲ ರಾಜಕೀಯ ಆಂದೋಲನಗಳಿಗೂ ನೆರವಾಗುವೆ ಎಂದು ಸ್ಪಷ್ಟವಾಗಿ ತನ್ನ ಇಂಗಿತವನ್ನು ತಿಳಿಸಿದ್ದಾರೆ.

ಬಿಜೆಪಿಗೂ ಕೇಂದ್ರಸರಕಾರ ದಲಿತ ವಿರೋಧಿ ನಿಲುವನ್ನು ಹೊಂದಿವೆ.ನ್ಯಾಯಾಂಗವು ಕೂಡಾ ಕೇಂದ್ರ ಸರಕಾರದ ದಲಿತ ವಿರೋಧಿ ನಿಲುವಿನಿಂದ ಪ್ರಭಾವಿತವಾಗಿದೆ. ರೋಹಿತ್ ವೇಮುಲಾ ಆತ್ಮಹತ್ಯೆ ಘಟನೆಯಲ್ಲಿ ವೈಸ್‌ಚಾನ್ಸಲರ್ ಅಪ್ಪಾರಾವ್ ವಿರುದ್ಧ ಕ್ರಮ ಜರಗಲಿಲ್ಲ. ಕೇಂದ್ರಸರಕಾದ ಹಸ್ತಕ್ಷೇಪವೇ ಇದಕ್ಕೆ ಕಾರಣವಾಗಿದೆ. ಕೇಸನ್ನು ದುರ್ಬಲಗೊಳಿಸಲಿಕ್ಕಾಗಿ ರೋಹಿತ್‌ನನ್ನು ದಲಿತನಲ್ಲ ಎಂದು ಬಿಜೆಪಿ ಪ್ರಚಾರ ಮಾಡಿತು. ಜಿಲ್ಲಾಧಿಕಾರಿ ಕೂಡಾ ಇದಕ್ಕೆ ಸಂಬಂಧಿಸಿದ ಸರಿಯಾದ ವರದಿಯನ್ನು ನೀಡಿದ್ದಾರೆ. ದಲಿತರ ಹಿಂದುಳಿದ ಸ್ಥಿತಿಗೂ ಜಮೀನಿಗೂ ಸಂಬಂಧವಿದೆ.ಜಮೀನಿನಲ್ಲಿ ದಲಿತರಿಗೆ ಹಕ್ಕು ಸಿಗಬೇಕಿದೆ. ಭೂಸುಧಾರಣೇ ಜಾರಿಗೆ ತಂದು ದಲಿತರಿಗೂ ಹಿಂದುಳಿದ ವಿಭಾಗದವರಿಗೂ ಜಮೀನನ್ನು ನೀಡಬೇಕು. ಈ ವಿಷಯದಲ್ಲಿ ಇತರ ರಾಜ್ಯಗಳಿಗೆ ಕೇರಳ ಮಾದರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಮಗನ ಮರಣ ಬಿಜೆಪಿಯಿಂದ ಕಿರುಕುಳ ಉಂಟಾದಾಗಲೂ ಮೊದಲು ಬೆಂಬಲಿಸಿರುವುದು ಕೇರಳದ ಎಡಪಂಥೀಯ ಆಂದೋಲನಗಳಾಗಿವೆ.ಇದಕ್ಕಾಗಿ ಹೆಚ್ಚು ಕೃತಜ್ಞಳಾಗಿರುವೆ ಎಂದು ರಾಧಿಕಾ ವೇಮುಲಾ ಹೇಳಿದ್ದಾರೆ. ರೋಹಿತ್ ವೇಮುಲಾರ ಸಹೋದರ ರಾಜ ವೇಮುಲಾ ತಾಯಿಯ ಜೊತೆ ಇದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News