ಫೆಸ್ಟಿವ್ ಸೇಲ್: ಅಮೆಝಾನ್, ಫ್ಲಿಪ್ ಕಾರ್ಟ್ ನ ವ್ಯವಹಾರ ಎಷ್ಟು ಗೊತ್ತೇ?

Update: 2016-10-06 07:40 GMT

ಹೊಸದಿಲ್ಲಿ, ಅ.6: ಅಮೇರಿಕ ಮೂಲದ ಆನ್ ಲೈನ್ ಶಾಪಿಂಗ್ ಸೈಟ್ ಅಮೆಝಾನ್ ಇಂಡಿಯಾ ತನ್ನ ಐದು ದಿನದ ಹಬ್ಬದ ಸೇಲ್‌ನಲ್ಲಿ ದೇಶದಾದ್ಯಂತ ಒಟ್ಟು 1.5 ಕೋಟಿ ವಸ್ತುಗಳನ್ನುಗ್ರಾಹಕರಿಗೆ ತಲುಪಿಸಿದೆ. ಕಂಪೆನಿ ತನ್ನ ಲಾಯಲ್ಟಿ ಯೋಜನೆ ಪ್ರೈಮ್ ಮುಖಾಂತರ ಒಟ್ಟು ಮಾರಾಟಗಳ ಮೂರನೇ ಒಂದಂಶದಷ್ಟು ವಸ್ತುಗಳನ್ನು ಮಾರಾಟ ಮಾಡಿದೆ.

ತನ್ನ ಅತ್ಯಧಿಕ ಮಾರಾಟವನ್ನು ದಾಖಲಿಸಿರುವ ಅಮೆಝಾನ್, ಸಾವಿರಾರು ಗ್ರಾಹಕರು ತನ್ನ ಪ್ರೈಮ್ ಸದಸ್ಯತನವನ್ನು 499 ರೂ. ಪಾವತಿಸಿ ಪಡೆದುಕೊಂಡಿದ್ದಾರೆಂದು ಹೇಳಿಕೊಂಡಿದೆ. ಅಮೆಝಾನ್ ಸೈಟ್ ನಲ್ಲಿರುವ ಬೆಸ್ಟ್ ಸೆಲ್ಲಿಂಗ್ ಸ್ಮಾರ್ಟ್ ಫೋನ್ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಪ್ರೈಮ್ ಯೋಜನೆಯ ಚಂದಾದಾರರಾಗಿದ್ದಾರೆಂದು, ವರದಿಯೊಂದು ತಿಳಿಸಿದೆ.

ಅಮೆಝಾನ್ ವರ್ಷಂಪ್ರತಿ ಶೇ. 150 ರಷ್ಟು ಪ್ರಗತಿ ಸಾಧಿಸುತ್ತಿದ್ದು, ಈ ದೀಪಾವಳಿ ಸೇಲ್ ಅಂತೂ ಅತ್ಯಂತ ದೊಡ್ಡ ಸೇಲ್ ಆಗಿತ್ತು, ಎಂದು ಸಂಸ್ಥೆಯ ಕಂಟ್ರಿ ಮ್ಯಾನೇಜರ್ ಅಮಿತ್ ಅಗರ್ವಾಲ್ ಹೇಳಿದ್ದಾರೆ.

ಕಳೆದ ವಾರದಿಂದೀಚೆಗೆ ಅಮೆಝಾನ್ ಹಾಗೂ ಇನ್ನೊಂದು ಇ-ಕಾಮರ್ಸ್ ಸೈಟ್ ಫ್ಲಿಪ್ ಕಾರ್ಟ್ ಗ್ರಾಹಕರನ್ನು ಸೆಳೆಯಲು ತಾಮುಂದು ನಾಮುಂದು ಎಂದು ಹೋರಾಡುತ್ತಿದ್ದು, ಫ್ಲಿಪ್ ಕಾರ್ಟ್ ಕೂಡ ತನ್ನ ಅತ್ಯಧಿಕ ಏಕ ದಿನ ಮಾರಾಟವನ್ನು ಅಕ್ಟೋಬರ್ 2 ರಂದು ದಾಖಲಿಸಿದೆ ಎಂದು ಹೇಳಿಕೊಂಡಿದೆ. ಈ ದಿನ ಫ್ಲಿಪ್ ಕಾರ್ಟ್ 1,400 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಿದೆ ಎಂದು ಕಂಪೆನಿ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News