ಗರ್ಭಿಣಿಗೆ ಮೊಬೈಲ್ ಬೆಳಕಿನಲ್ಲಿ ಹೆರಿಗೆ

Update: 2016-10-06 09:42 GMT

ಗುರುಗ್ರಾಮ್(ಗುರ್ಗಾಂವ್), ಅ. 6: ಹೆರಿಗೆ ನಡೆಸುತ್ತಿದ್ದವೇಳೆ ವಿದ್ಯುತ್ ಕೈಕೊಟ್ಟ ಪರಿಣಾಮ ಮೊಬೈಲ್ ಬೆಳಕಿನಲ್ಲಿ ಯುವತಿಯೊಬ್ಬಳನ್ನು ಹೆರಿಗೆ ಮಾಡಿಸಿದ ಘಟನೆ ಹರ್ಯಾನದ ಗುಡ್‌ಗಾಂವ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬಾಲಿವುಡ್ ಸೂಪರ್ ಹಿಟ್ ಸಿನೆಮಾ ತ್ರೀಈಡಿಯಟ್‌ನ ದೃಶ್ಯಗಳನ್ನು ಸ್ಮರಿಸುವಂತೆ ಹೆರಿಗೆ ನಡೆದಿದ್ದು, ಆರೋಗ್ಯಪೂರ್ಣ ಗಂಡು ಮಗುವಿನ ಹೆರಿಗೆಯಾಗಿದೆ.

ಹರ್ಯಾನದ ಕಪಿಲ್ ಕುಮಾರ್ ಅವರ ಪತ್ನಿ ಕವಿತಾ ಮೊಬೈಲ್ ಬೆಳಕಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ರವಿವಾರ ಸಂಜೆ ಹೆರಿಗೆಗಾಗಿ ಕವಿತಾರನ್ನು ಆಸ್ಪತ್ರೆಗೆ ಕರೆತರಲಾಗಿತ್ತು.

ಆದರೆ ಆಸ್ಪತ್ರೆಯಲ್ಲಿ ವಿದ್ಯುತ್ ಇರಲಿಲ್ಲ ಎಂದು ಕಪಿಲ್ ಕುಮಾರ್ ಹೇಳಿದ್ದಾರೆ. ಕ್ಯಾಂಡಲ್ ಉರಿಸಿ ವಾರ್ಡ್‌ನಲ್ಲಿ ಡಲಾಗಿತ್ತು. ವಾರ್ಡ್‌ನ ಹೊರಭಾಗದಲ್ಲಿ ಸಂಪೂರ್ಣ ಕತ್ತಲಿತ್ತುಎಂದು ಅವರು ತನ್ನ ದುರನುಭವವನ್ನು ವಿವರಿಸಿದ್ದಾರೆ.

ಏನಿದ್ದರೂ ಕತ್ತಲು ತುಂಬಿದ ಆ ರಾತ್ರಿಯಲ್ಲಿ ಕವಿತಾಒಂದು ಗಂಡುಮಗುವನ್ನು ಹೆತ್ತಿದ್ದಾರೆ. ನರ್ಸ್‌ಗಳು ಕ್ಯಾಂಡಲ್ ಉರಿಸಿ ಬೆಳಕುಮಾಡಿದ್ದರು ಮತ್ತು ಮೊಬೈಲ್‌ಫೋನ್ ಬೆಳಕನ್ನು ಬಳಸಿ ಹೆರಿಗೆ ಮಾಡಿಸಲಾಗಿದೆ. ಸುಖಪ್ರಸವ ಆದ್ದರಿಂದ ಕವಿತಾ ಸೋಮವಾರವೇ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಕವಿತಾರ ಹೆರಿಗೆ ನಡೆದ ಗುಡ್‌ಗಾಂವ್‌ನ ಸೆಕ್ಟರ್ ಹತ್ತರ ಸಿವಿಲ್ ಆಸ್ಪತ್ರೆಯ ಪರಿಸ್ಥಿತಿಯಲ್ಲಿ ಬದಲಾವಣೆಯೇ ಆಗಿಲ್ಲ. ಮಂಗಳವಾರವೂ ಸಂಜೆಯಿಂದ ರಾತ್ರಿಹನ್ನೊಂದು ಗಂಟೆಯವರೆಗೆ ವಿದ್ಯುತ್ ಇರಲಿಲ್ಲ. ಇದನ್ನು ಆಸ್ಪತ್ರೆಯ ದಾದಿಯರು ಮಾಧ್ಯಮದವರಿಗೆ ತಿಳಿಸಿದ್ದಾರೆ.ಆಸ್ಪತ್ರೆಯೆಲ್ಲಿ ಹೆಸರಿಗೆ ಒಂದು ಜನರೇಟರ್ ಇದೆ. ಆದರೆ ಸಾಕಷ್ಟು ಫಂಡ್ ಇಲ್ಲದ್ದರಿಂದ ಡೀಸೆಲ್ ತರಿಸಲು ಹಣ ಇರಲಿಲ್ಲ ಎನ್ನಲಾಗಿದೆ. ಕತ್ತಲ ಜನನ ಗುಡ್‌ಗಾಂವ್‌ನ ಈ ಆಸ್ಪತ್ರೆಯಲ್ಲಿ ಇದೇ ಮೊದಲ ಸಲ ನಡೆದಿಲ್ಲ.ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ 2015ರಲ್ಲಿ ಓರ್ವ ಮಹಿಳೆಗೆ ಕ್ಯಾಂಡಲ್‌ನ ಬೆಳಕಿನಲ್ಲಿ ಹೆರಿಗೆ ಮಾಡಿಸಲಾಗಿತ್ತು. ಈ ಘಟನೆ ಗುಡ್‌ಗಾಂವ್ ಎದರಿಸುತ್ತಿರುವ ಭೀಕರ ವಿದ್ಯುತ್ ಕೊರತೆಯತ್ತ ಗಮನಸೆಳೆಯುತ್ತಿವೆ. ಹಲವಾರು ಅಂತಾರಾಷ್ಟ್ರೀಯ ಕಾರ್ಪೊರೇಟ್ ಕಂಪೆನಿಗಳ ಕೇಂದ್ರ ಇದಾಗಿದ್ರೂ ಹಲವು ಕಡೆ ಹೆಚ್ಚಿನ ವೇಳೆ ವಿದ್ಯುತ್ ಸರಬರಾಜು ಸ್ಥಗಿತವಾಗಿರುತ್ತದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News