ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಶಸ್ತಿ ಪಟ್ಟಿ ಪ್ರಕಟ

Update: 2016-10-06 18:54 GMT

ಬೆಂಗಳೂರು, ಅ.6: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಸಕ್ತ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ 2015ನೆ ಸಾಲಿನ ಪುಸ್ತಕಗಳ ಬಹುಮಾನಿತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗೌರವ ಪ್ರಶಸ್ತಿಯನ್ನು ಉತ್ತರ ಕರ್ನಾಟಕದ ಡಾ.ಬಿ.ಎ.ಸನದಿ ಹೆರವಟ್ಟಾ, ಹಿರಿಯೂರಿನ ಡಾ.ಎಂ.ಎಸ್.ಲಕ್ಷ್ಮಣಾಚಾರ್, ಬೆಂಗಳೂರಿನ ಪ್ರೊ.ಕೆ.ಎಂ. ಸೀತಾರಾಮಯ್ಯ ಹಾಗೂ ಎಸ್.ಕೆ.ರಮಾದೇವಮ್ಮ ಮತ್ತು ಹಂಪಿಯ ಡಾ.ಬಿ. ಸುಜ್ಞಾನಮೂರ್ತಿ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿಯು 50 ಸಾವಿರ ನಗದು ಬಹುಮಾನ ಹೊಂದಿದ್ದು, ಸ್ಮರಣಿಕೆ, ಪ್ರಶಸ್ತಿಫಲಕ ಹೊಂದಿರುತ್ತದೆ. ಹಾಗೆಯೆ ಪುಸ್ತಕ ಬಹುಮಾನವನ್ನು ಕಥಾಸಾಹಿತ್ಯದಲ್ಲಿ ಗಿರಡ್ಡಿ ಗೋವಿಂದರಾಜು ಅನುವಾದಿಸಿರುವ ‘ಜಯ ಮಹಾಭಾರತದ ಸಚಿತ್ರ ಮರುಕಥನ’ ಕೃತಿಗೆ, ಮೋಳಿ ವರ್ಗಿಸ್ ಅವರು ಅನುವಾದಿಸಿರುವ ‘ಅಕ್ಕ ನುಡಿಯುತ್ತಾಳೆ’ ಕಾವ್ಯ ಸಂಕಲನಕ್ಕೆ, ಸೂಸನ್ ಡೇನಿಯಲ್ ಅನುವಾದಿತ ‘ಕುಸುಮಬಾಲೆ’ ಅನ್ಯಭಾಷೆಯ ಕೃತಿಗೆ ನೀಡಲಾಗುತ್ತದೆ.

ಅಲ್ಲದೆ, ಶುಭದಾ ಅಮಿನಭಾವಿ ಅವರು ಅನುವಾದಿಸಿರುವ ಆತ್ಮಕಥೆ ‘ಭೀಮಣ್ಣನ ಮಗ’ ಕೃತಿಗೆ ಹಾಗೂ ಗಾಯತ್ರಿ ಅವರು ಅನುವಾದಿಸಿರುವ ವೈಚಾರಿಕ ಸಾಹಿತ್ಯದ ‘ಲೋಕತತ್ತ್ವಶಾಸ್ತ್ರ ಪ್ರವೇಶಿಕೆ-1 ಆರಂಭಿಕ ಹಂತಗಳು’ ಕೃತಿಗೆ ನೀಡಲಾಗುತ್ತಿದೆ. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಸ್ಮರಣಿಕೆ,ಪ್ರಶಸ್ತಿ ಫಲಕ ಹೊಂದಿರುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News