ರಾಹುಲ್ ಗೆ ತಿರುಗೇಟು ನೀಡಿದ ಕೇಜ್ರಿವಾಲ್
ಹೊಸದಿಲ್ಲಿ, ಅಕ್ಟೋಬರ್ 7: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದಿಲ್ಲಿಮುಖ್ಯಮಂತ್ರಿ ಕೇಜ್ರಿವಾಲ್ ಟೀಕಾಪ್ರಹಾರ ಹರಿಸಿದ್ದಾರೆಂದು ವೆಬ್ ಪೋರ್ಟಲ್ಲೊಂದು ವರದಿ ಮಾಡಿದೆ. ಕಾಶ್ಮೀರದಲ್ಲಿ ಜೀವ ಕಳಕೊಂಡ ಸೈನಿಕರ ರಕ್ತದಿಂದ ಪ್ರಧಾನಿ ರಾಜಕೀಯ ಮಾಡುತ್ತಿದ್ದಾರೆ ಎಂದಿದ್ದ ರಾಹುಲ್ ಗಾಂಧಿಯನ್ನು ಕೇಜ್ರಿವಾಲ್ ಖಂಡಿಸಿದ್ದಾರೆ. ಸೈನಿಕರ ಕುರಿತು ರಾಹುಲ್ ಗಾಂದಿ ಹೇಳಿದ ವಿಷಯಗಳನ್ನು ಬಲವಾಗಿ ಖಂಡಿಸುತ್ತೇನೆ. ಅವರು ಈರೀತಿ ಎಂದೂ ಹೇಳಬಾರದಿತ್ತು. ಎಲ್ಲಭಾರತೀಯರು ಒಗ್ಗೂಡಿ ನಿಲ್ಲಬೇಕಾದ ವಿಷಯ ಇದೆಂದು ಕೇಜ್ರಿವಾಲ್ ಹೇಳಿದ್ದಾರೆ.
ಸೈನಿಕರ ರಕ್ತದ ಹಿಂದೆ ಅಡಗಿ ಕೂತು ರಾಜಕೀಯ ದಲ್ಲಾಳಿತನವನ್ನುಪ್ರಧಾನಿ ಮೋದಿ ನಡೆಸುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದರೆನ್ನಲಾಗಿದೆ. ಸೈನಿಕರು ಜಮ್ಮುಕಾಶ್ಮೀರಕ್ಕಾಗಿ ರಕ್ತ ತೇದಿದ್ದಾರೆ. ದೇಶಕ್ಕಾಗಿ ಮಿಂಚಿನ ಆಕ್ರಮಣ ನಡೆಸಿದ್ದಾರೆ. ಆದರೆ ಅದರ ಹೆಸರಲ್ಲಿ ರಾಜಕೀಯ ಸರಕಾರ ರಾಜಕೀಯ ಶೋಷಣೆ ನಡೆಸುತ್ತಿದೆ ಎಂದು ರಾಹುಲ್‌ರ ಆರೋಪವಾಗಿತ್ತು.
ಉತ್ತರಪ್ರದೇಶದಲ್ಲಿ ನಡೆದ ಕಿಸಾನ್‌ಯಾತ್ರೆಯ ಸಮಾರೋಪ ಸಮಾರಂಭ ನಿನ್ನೆ ದಿಲ್ಲಿಯಲ್ಲಿನಡೆದಿತ್ತು. ಅದರಲ್ಲಿ ರಾಹುಲ್ ಮೋದಿ ವಿರುದ್ಧ ಟೀಕೆ ಮಾಡಿದ್ದರು. ಮಿಂಚಿನ ಆಕ್ರಮಣವನ್ನು ಸಂಪೂರ್ಣವಾಗಿ ಬೆಂಬಲಿಸುವೆ ಆದರೆ ಸೇನೆಯನ್ನು ರಾಜಕೀಯ ಲಾಭಕ್ಕಾಗಿಬಳಸುವುದನ್ನು ವಿರೋಧಿಸುತ್ತೇನೆ ಎಂದು ರಾಹುಲ್ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆಂದು ವರದಿ ತಿಳಿಸಿದೆ.