×
Ad

ಬಿಹಾರ ಸರಕಾರದ ಮದ್ಯ ನಿಷೇಧ ಕಾಯ್ದೆಗೆ ಸುಪ್ರೀಂಕೋರ್ಟ್‌ನಲ್ಲಿ ಜಯ

Update: 2016-10-07 18:27 IST

ಹೊಸದಿಲ್ಲಿ, ಅ.7: ಬಿಹಾರದ ವಿವಾದಾತ್ಮಕ ಮದ್ಯ ನಿಷೇಧ ಕಾನೂನುಬಾಹಿರವಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ. ಮುಖ್ಯಮಂತ್ರಿ ನಿತೀಶ್‌ಕುಮಾರ್‌ರ ಮದ್ಯ ನಿಷೇಧ ನೀತಿಯು ಸಂವಿಧಾನಬಾಹಿರವೆಂದು ಪಾಟ್ನಾ ಹೈಕೋರ್ಟ್ ಕಳೆದ ವಾರ ತೀರ್ಪು ನೀಡಿತ್ತು. ಈ ಆದೇಶದ ಪರಿಶೀಲನೆ ನಡೆಸುತ್ತಿದ್ದ ವೇಳೆ ಸುಪ್ರೀಂಕೋರ್ಟ್ ಅದನ್ನು ರದ್ದುಗೊಳಿಸಿದೆ.

ಪಾಟ್ನಾ ಹೈಕೋರ್ಟ್‌ನಲ್ಲಿ ಸೋಲಾದ ಬಳಿಕ ನಿಷೇಧವನ್ನು ಇರಗೊಳಿಸುವಂತೆ ಬಿಹಾರ ಸರಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಮೂರನೆ ಬಾರಿಗೆ ಮರು ಆಯ್ಕೆಗೊಂಡು ಸರಕಾರ ರಚಿಸಿದ ಬಳಿಕ, ನಿತೀಶ್ ಸರಕಾರವು ಚುನಾವಣಾ ಆಶ್ವಾಸನೆಯಂತೆ ರಾಜ್ಯದಲ್ಲಿ ಕಠಿಣ ಮದ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಕುಟುಂಬದ ಯಾವನೇ ಒಬ್ಬ ಸದಸ್ಯ ಮದ್ಯಪಾನ ಮಾಡಿರುವುದು ಪತ್ತೆಯಾದರೂ, ಕುಟುಂಬದ ಎಲ್ಲ ಸದಸ್ಯರನ್ನು ಶಿಕ್ಷಿಸುವಂತಹ ಕಠೋರ ಪ್ರಸ್ತಾವಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News