ಭಾರತವೂ ಬೇಕು, ಪಾಕಿಸ್ತಾನವೂ ಬೇಕು

Update: 2016-10-07 14:53 GMT

ವಾಶಿಂಗ್ಟನ್, ಅ. 7: ಭಾರತ ಮತ್ತು ಪಾಕಿಸ್ತಾನಗಳೊಂದಿಗಿನ ಅಮೆರಿಕದ ಸಂಬಂಧ ‘‘ಕೂಡಿಸು-ಕಳೆ ಆಟವಲ್ಲ’’ ಹಾಗೂ ಈ ಎರಡೂ ದೇಶಗಳೊಂದಿಗೆ ಅಮೆರಿಕ ಪ್ರತ್ಯೇಕ ಭದ್ರತಾ ಹಿತಾಸಕ್ತಿಗಳನ್ನು ಹೊಂದಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಶುಕ್ರವಾರ ಹೇಳಿದೆ.

‘‘ಈ ಸಂಬಂಧಗಳನ್ನು ನಾವು ಕೂಡಿಸು-ಕಳೆ ಆಟವನ್ನಾಗಿ ಪರಿಗಣಿಸುವುದಿಲ್ಲ’’ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಪೀಟರ್ ಕುಕ್ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.

ಪಾಕಿಸ್ತಾನ ಮತ್ತು ರಶ್ಯಗಳ ನಡುವೆ ಈಗ ನಡೆಯುತ್ತಿರುವ ಸೇನಾ ಅಭ್ಯಾಸದ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

‘‘ಭಾರತದೊಂದಿಗೆ ನಾವೊಂದು ಸಂಬಂಧವನ್ನು ಹೊಂದಿದ್ದೇವೆ. ನಾವು ಪಾಕಿಸ್ತಾನದೊಂದಿಗೂ ಸುದೀರ್ಘ ಅವಧಿಯ ಬಾಂಧವ್ಯವನ್ನು ಹೊಂದಿದ್ದೇವೆ. ಪಾಕಿಸ್ತಾನದೊಂದಿಗೆ ನಾವು ಭದ್ರತಾ ಹಿತಾಸಕ್ತಿಗಳನ್ನು ಹೊಂದಿದ್ದೇವೆ. ಅದೇ ವೇಳೆ, ನಾವು ಭಾರತದೊಂದಿಗೂ ಪ್ರತ್ಯೇಕ ಭದ್ರತಾ ಹಿತಾಸಕ್ತಿಗಳನ್ನು ಹೊಂದಿದ್ದೇವೆ. ಈ ದೃಷ್ಟಿಯಿಂದ ನಾವು ಸಂಬಂಧಗಳನ್ನು ನೋಡುವುದನ್ನು ಮುಂದುವರಿಸುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News