×
Ad

ಪಟಾಕಿ ತಯಾರಿಕೆ ಘಟಕದಲ್ಲಿ ಭಾರೀ ಅಗ್ನಿ ಅವಘಡ

Update: 2016-10-07 22:57 IST

 ಮದುರೈ,ಅ.7: ತಮಿಳುನಾಡಿನ ಶಿವಕಾಶಿ ಸಮೀಪದ ಪಟಾಕಿ ತಯಾರಿಕೆ ಕಾರ್ಖಾನೆ ಯೊಂದರಲ್ಲಿ ಇಂದು ಬೆೆಳಿಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು,ಯಾವುದೇ ಸಾವುನೋವು ವರದಿಯಾಗಿಲ್ಲ.

ಶಿವಕಾಶಿ ಸಮೀಪದ ಪೆರಪಟ್ಟಿಯಲ್ಲಿರುವ ಶಿವರಾಜ್ ಫೈರ ವರ್ಕ್ಸ್‌ನ ದಾಸ್ತಾನು ಕೋಣೆಯಲ್ಲಿ ಸ್ಫೋಟ ಸಂಭವಿಸಿದೆ. ಈ ಕಾರ್ಖಾನೆ ಪ್ರದೇಶದಲ್ಲಿಯ ಪ್ರಮುಖ ಪಟಾಕಿ ತಯಾರಿಕೆ ಘಟಕಗಳಲ್ಲೊಂದಾಗಿದ್ದು, ಅಗತ್ಯ ಪರವಾನಿಗೆಯನ್ನು ಹೊಂದಿದೆ.
 ಶುಕ್ರವಾರ ಬೆಳಗ್ಗೆ ದಿನದ ಕೆಲಸಕ್ಕಾಗಿ ಕಾರ್ಮಿಕರು ಕಾರ್ಖಾನೆಯ ಆವರಣದಲ್ಲಿ ಸೇರತೊಡಗಿದ್ದಾಗ ದಾಸ್ತಾನು ಕೋಣೆಯಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಹರಡಿಕೊಂಡಿತ್ತು. ಕ್ಷಣಾರ್ಧದಲ್ಲಿ ದಾಸ್ತಾನು ಓಣೆ ಸುಟ್ಟು ಭಸ್ಮಗೊಂಡಿತ್ತು. ಅಧೃಷ್ಟ ವಶಾತ್ ಈ ಅವಘಡ ಸಂಭವಿಸಿದಾಗ ಎಲ್ಲ ಕಾರ್ಮಿಕರು ಅಪಾಯದಿಂದ ಪಾರಾಗುವಲ್ಲಿ ಸಫಲರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News