ಅಯ್ಯೋ ... ಈಗ ಆಕ್ಸ್ ಫರ್ಡ್ ಇಂಗ್ಲಿಷ್ ಡಿಕ್ಷನರಿ ಸೇರಿದ ಪದ ಯಾವುದು ನೋಡಿ !

Update: 2016-10-08 07:47 GMT

ಹೊಸದಿಲ್ಲಿ, ಅ.8: "ನೀವು ದಕ್ಷಿಣ ಭಾರತೀಯರು  ಮತ್ತು ನೀವು ಈವರೆಗೆ  'ಅಯ್ಯೋ' ಎಂಬ ಪದ ಬಳಸಿಲ್ಲ ಎಂದಾದರೆ ನಿಮ್ಮಷ್ಟು ನೀರಸ ಜೀವನ ಈ ಲೋಕದಲ್ಲಿ ಯಾರದೂ ಇರಲಿಲ್ಲ ಎಂದರ್ಥ. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳು ನಾಡು ಹಾಗು ಕರ್ನಾಟಕಗಳಲ್ಲಿ ಸರ್ವೇ ಸಮಯವಾಗಿರುವ ಈ ಪದ ಈಗ ಆಕ್ಸ್ ಫರ್ಡ್ ಇಂಗ್ಲಿಷ್ ಡಿಕ್ಷನರಿಯಲ್ಲೂ  ಸೇರ್ಪಡೆಯಾಗಿದೆ ! 

ಸೆಪ್ಟೆಂಬರ್ ನಲ್ಲಿ ನಲ್ಲಿ ಸೇರ್ಪಡೆಯಾಗಿರುವ scrumdiddlyumptious (ಸ್ವಾದಿಷ್ಟ ) ಹಾಗು yogasanaಗಳ ಜೊತೆ 'aiyoh' ( ಅಯ್ಯೋ) ಹಾಗು 'aiyah' (ಅಯ್ಯಾ) ಕೂಡ ಸೇರಿವೆ. ದಿಗಿಲು, ಆಶ್ಚರ್ಯ, ಆಘಾತ ಮತ್ತಿತರ ಹಲವು ಭಾವನೆಗಳನ್ನು ಪ್ರಕಟಿಸಲು ' ಅಯ್ಯೋ' ಸಾಮಾನ್ಯವಾಗಿ ಬಳಕೆಯಾಗುತ್ತದೆ. ಇನ್ನು 'ಅಯ್ಯಾ' ಸಾಮಾನ್ಯವಾಗಿ ಯಾರನ್ನಾದರೂ ಕರೆಯಲು ಬಳಸುವ ಪದ. ಇದು ಗೌರವ ಸೂಚಕವಾಗಿ ಬಳಸುವ ' ಅಯ್ಯ' ಕ್ಕಿಂತ ವಿಭಿನ್ನ. 

ಆಕ್ಸ್ ಫರ್ಡ್ ಇಂಗ್ಲಿಷ್ ಡಿಕ್ಷನರಿ 150 ವರ್ಷಗಳಷ್ಟು ಇತಿಹಾಸವಿರುವ 6 ಲಕ್ಷ ಎಂಟ್ರಿಗಳಿರುವ ವಿಶ್ವ ವಿಖ್ಯಾತ ಇಂಗ್ಲಿಷ್ ನಿಘಂಟು. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News