ಭಾರತ-ಪಾಕ್ ಗಡಿಗೆ ರಾಜನಾಥ್ ಭೇಟಿ: ಭದ್ರತೆಯ ಪುನರ್‌ಪರಿಶೀಲನೆ

Update: 2016-10-08 13:10 GMT

ಬಾರ್ಮೆರ್(ರಾಜಸ್ಥಾನ),ಅ.8: ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆಯೇ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರು ಗಡಿಯಲ್ಲಿನ ಭದ್ರತಾ ಸ್ಥಿತಿಯನ್ನು ಪುನರ್ ಪರಿಶೀಲಿಸಲು ಇಂದು ಬಾರ್ಮೆರ ಜಿಲ್ಲೆಗೆ ಭೇಟಿ ನೀಡಿದರು.

ಸಿಂಗ್ ಅವರು ಸಹಾಯಕ ಗೃಹಸಚಿವ ಕಿರಣ್ ರಿಜಿಜು ಮತ್ತು ಬಿಎಸ್‌ಎಫ್‌ನ ಹಿರಿಯ ಅಧಿಕಾರಿಗಳೊಂದಿಗೆ ಜೈಸಲ್ಮೇರ್‌ನಿಂದ ಇಲ್ಲಿಗೆ ಆಗಮಿಸಿದರು ಎಂದು ಮೂಲಗಳು ತಿಳಿಸಿದವು.

ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ನಾಲ್ಕು ರಾಜ್ಯಗಳ ಗೃಹಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳ ಸಭೆ ನಿನ್ನೆ ದಿಲ್ಲಿಯಲ್ಲಿ ನಡೆದಿತ್ತು.

ಜಮ್ಮು-ಕಾಶ್ಮೀರದ ನಿಯಂತ್ರಣ ರೇಖೆಯಾಚೆ ಸೇನೆಯು ಸೀಮಿತ ದಾಳಿಗಳನ್ನು ನಡೆಸಿದ ನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉದ್ವಿಗ್ನತೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪುನರ್‌ಪರಿಶೀಲಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News