ಸಚಿವೆ ಪಂಕಜಾ ಮುಂಢೆಯಿಂದ ಅರ್ಚಕನಿಗೆ ಬೆದರಿಕೆ; ಆಡಿಯೋ
ಮುಂಬೈ, ಅ.8: ಮಹಾರಾಷ್ಟ್ರದ ಸಚಿವೆ ಪಂಕಜಾ ಮುಂಢೆ ತನ್ನ ಕ್ಷೇತ್ರದ ಪ್ರಸಿದ್ಧ ದೇವಾಲಯವೊಂದರ ಅರ್ಚಕನಿಗೆ ಧಮಕಿ ಹಾಕಿರುವ ಆಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುತ್ತುತ್ತಿದೆ.
ಆಡಿಯೋದ ಸಾಚಾತನವನ್ನು ಖಚಿತಪಡಿಸಲು ಎನ್‌ಡಿಟಿವಿಯಿಂದ ಸಾಧ್ಯವಾಗಿಲ್ಲ. ಈ ವಿವಾದದ ಕುರಿತು ಪಂಕಜಾ ಆಗಲಿ, ಅವರ ಪಕ್ಷ ಬಿಜೆಪಿಯಾಗಲಿ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.
ವಂಜಾರಿ ಸಮುದಾಯದ ಅತ್ಯಂತ ಪ್ರಮುಖ ಆರಾಧನಾ ಕ್ಷೇತ್ರವಾಗಿರುವ ಭಗವಾನ್‌ಗಡದ ಈ ದೇವಾಲಯದ ಪ್ರಧಾನ ಅರ್ಚಕ ನಾಮದೇವ ಶಾಸ್ತ್ರಿ ಎಂಬವರು ದಸರೆಯ ವೇಳೆ ನಡೆದ ವಾರ್ಷಿಕ ಉತ್ಸವವೊಂದರಲ್ಲಿ ವಂಜಾರಿ ಸಮುದಾಯದವರೇ ಆಗಿರುವ ಮುಂಢೆಯವರಿಗೆ ಭಾಷಣ ಮಾಡಲು ಅವಕಾಶ ನಿರಾಕರಿಸಿದ್ದರೆನ್ನಲಾಗಿದೆ.
ಈ ಉತ್ಸವವನ್ನು ಇನ್ನು ಮುಂದೆ ರಾಜಕೀಯಕ್ಕೆ ಬಳಸುವಂತಿಲ್ಲ. ಪಂಕಜಾರ ತಂದೆ, 2014ರಲ್ಲಿ ನಿಧನರಾಗಿದ್ದ ಗೋಪಿನಾಥ ಮುಂಢೆ ದೇಗುಲದಲ್ಲಿ ರಾಜ ಕೀಯ ಸಂದೇಶ ನೀಡುವ ಭಾಷಣ ಮಾಡುತ್ತಿದ್ದರೆಂದು ಅರ್ಚಕರು ಹೇಳುತ್ತಾರೆ.
10 ದಿನಗಳ ಹಿಂದೆ ಪಂಕಜಾ ಹಾಗೂ ಅರ್ಚಕರ ಬೆಂಬಲಿಗರ ನಡುವೆ ಜಗಳ ನಡೆದಿತ್ತು. ಅರ್ಚಕರ ಬೆಂಬಲಿಗರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುವುದು. ಅದಕ್ಕಾಗಿ ತಾನು ಹಣಬಲವನ್ನು ಉಪಯೋಗಿಸುತ್ತೇನೆಂದು ಪಂಕಜಾರ ಸ್ವರವನ್ನು ಹೋಲುವ ಸ್ವರವೊಂದು ಎಚ್ಚರಿಕೆ ನೀಡಿರುವುದು ಆಡಿಯೋ ಟೇಪ್‌ನಲ್ಲಿ ದಾಖಲಾಗಿದೆ.