ಬಾಂಗ್ಲಾ ವಿರುದ್ಧ ಏಕದಿನ ಸರಣಿ ಜಯಿಸಿದ ಇಂಗ್ಲೆಂಡ್

Update: 2016-10-12 18:07 GMT

ಚಿತ್ತಗಾಂಗ್, ಅ.12: ಬಾಂಗ್ಲಾದೇಶವನ್ನು 4 ವಿಕೆಟ್‌ಗಳ ಅಂತರದಿಂದ ಮಣಿಸಿದ ಇಂಗ್ಲೆಂಡ್ ತಂಡ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

ಬುಧವಾರ ಇಲ್ಲಿ ನಡೆದ 3ನೆ ಏಕದಿನ ಪಂದ್ಯದಲ್ಲಿ ಮುಶ್ಫಿಕುರ್ರಹೀಂ(ಔಟಾಗದೆ 67), ಸಬ್ಬೀರ್ರಹ್ಮಾನ್ (49), ಇಮ್ರುಲ್ ಕಾಯೆಸ್(46) ಹಾಗೂ ತಮೀಮ್ ಇಕ್ಬಾಲ್(45) ಕೊಡುಗೆಯ ನೆರವಿನಿಂದ ಬಾಂಗ್ಲಾದೇಶ ತಂಡ ಇಂಗ್ಲೆಂಡ್ ಗೆಲುವಿಗೆ 278 ರನ್ ಗುರಿ ನೀಡಿತು.

ಮೊದಲ ವಿಕೆಟ್‌ಗೆ 80 ರನ್ ಜೊತೆಯಾಟ ನಡೆಸಿದ ಇಕ್ಬಾಲ್ ಹಾಗೂ ಕಾಯೆಸ್ ಬಾಂಗ್ಲಾಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ, ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್(4-43) ಬಾಂಗ್ಲಾವನ್ನು 6 ವಿಕೆಟ್ ನಷ್ಟಕ್ಕೆ 277 ರನ್‌ಗೆ ನಿಯಂತ್ರಿಸಿದರು.

ಸವಾಲಿನ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಡಕೆಟ್(63), ಬಿಲ್ಲಿಂಗ್ಸ್(62), ಸ್ಟೋಕ್ಸ್(ಔಟಾಗದೆ 47) ಸಾಹಸದಿಂದ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಮುರ್ತಝಾ(2-51), ಇಸ್ಲಾಮ್(2-61) ತಲಾ 2 ವಿಕೆಟ್ ಕಬಳಿಸಿದರು.

ರಶೀದ್ ಪಂದ್ಯಶ್ರೇಷ್ಠ ಹಾಗೂ ಸ್ಟೋಕ್ಸ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News