×
Ad

ಶಾಂೈ ಮಾಸ್ಟರ್ಸ್‌: ನಡಾಲ್‌ಗೆ ಆಘಾತಕಾರಿ ಸೋಲು

Update: 2016-10-12 23:40 IST

ಶಾಂೈ, ಅ.12: ಸ್ಪೇನ್‌ನ ಸ್ಟಾರ್ ಆಟಗಾರ ರಫೆಲ್ ನಡಾಲ್ ಶಾಂೈ ಮಾಸ್ಟರ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ವಿಕ್ಟರ್ ಟ್ರೊಯ್ಕಿ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದಾರೆ.

ಬುಧವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ನಡಾಲ್ ಅವರು ಟ್ರೊಯ್ಕಿ ವಿರುದ್ಧ 6-3, 7-6(7/3) ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಮೊದಲ ಸೆಟ್‌ನಲ್ಲಿ 6-3 ಅಂತರದಿಂದ ಸೋತಿದ್ದ ನಡಾಲ್ ಎರಡನೆ ಸೆಟ್‌ನಲ್ಲಿ ಟೈ-ಬ್ರೇಕ್‌ನಲ್ಲಿ ಸೋತರು. 14 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಸರ್ಬಿಯದ ಆಟಗಾರನ ವಿರುದ್ಧ ಮೊದಲ ಸೋಲು ಕಂಡಿದ್ದಾರೆ. ನಡಾಲ್ ಸೋತಿದ್ದಕ್ಕೆ ಚೀನಾದ ಅಭಿಮಾನಿಗಳು ಭಾರೀ ಬೇಸರ ವ್ಯಕ್ತಪಡಿಸಿದರು.

ಉಳಿದ ಪಂದ್ಯಗಳಲ್ಲಿ ಯುಎಸ್ ಓಪನ್ ಚಾಂಪಿಯನ್ ಸ್ವಿಸ್‌ನ ಸ್ಟಾನ್ ವಾವ್ರಿಂಕ ಬ್ರಿಟನ್‌ನ ಕೈಲ್ ಎಡ್ಮಂಡ್ ವಿರುದ್ಧ 6-3, 6-3 ನೇರ ಸೆಟ್‌ಗಳ ಅಂತರದಿಂದ ಜಯ ಸಾಧಿಸಿ ಮೂರನೆ ಸುತ್ತು ತಲುಪಿದರು.

ಕೆನಡಾದ ಮಿಲೊಸ್ ರಾವೊನಿಕ್ ಅವರು ಪಾಲೊ ಲೊರೆಂಝಿ ವಿರುದ್ಧ 6-2, 6-4 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರೆ, ಆದರೆ, ಝೆಕ್‌ನ ಥಾಮಸ್ ಬೆರ್ಡಿಕ್ ಅವರು ಮಾರ್ಸೆಲ್ ಗ್ರಾನೊಲ್ಲರ್ಸ್‌ಗೆ 7-6(7/4), 7-6(7/1)ಸೆಟ್‌ಗಳ ಅಂತರದಿಂದ ಶರಣಾದರು.

ದ್ವಿತೀಯ ಸುತ್ತಿನಲ್ಲಿ ಮುಗ್ಗರಿಸಿದ ಬೋಪಣ್ಣ ಜೋಡಿ

ಶಾಂೈ, ಅ.12: ಭಾರತದ ಅಗ್ರ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಹಾಗೂ ಅವರ ಜೊತೆಗಾರ ಡೇನಿಯಲ್ ನೆಸ್ಟರ್ ಶಾಂೈ ಮಾಸ್ಟರ್ಸ್‌ ಟೂರ್ನಿಯ ಎರಡನೆ ಸುತ್ತಿನಲ್ಲಿ ಸೋತು ನಿರಾಸೆಗೊಳಿಸಿದ್ದಾರೆ.

ಆರನೆ ಶ್ರೇಯಾಂಕದ ಬೋಪಣ್ಣ-ನೆಸ್ಟರ್ ಜೋಡಿ ಪುರುಷರ ಡಬಲ್ಸ್‌ನ 2ನೆ ಸುತ್ತಿನ ಪಂದ್ಯದಲ್ಲಿ ಕ್ರೊಯೇಷಿಯದ ಜೋಡಿ ಮರಿನ್ ಸಿಲಿಕ್ ಹಾಗೂ ಮ್ಯಾಟ್ ಪಾವಿಕ್ ವಿರುದ್ಧ 5-7, 6-4(10/8) ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಕೊಡಗಿನ ಕುವರ ಬೋಪಣ್ಣ ಕಳೆದ ತಿಂಗಳು ರೊಮಾನಿಯದ ಫ್ಲಾರಿನ್ ಮರ್ಗಿಯರಿಂದ ಬೇರ್ಪಟ್ಟು ನೆಸ್ಟರ್ ಅವರೊಂದಿಗೆ ಡಬಲ್ಸ್ ಪಂದ್ಯ ಆಡಲು ಆರಂಭಿಸಿದ್ದಾರೆ. ಚೀನಾ ಓಪನ್‌ನಲ್ಲಿ ಈ ಜೋಡಿ ಮೊದಲ ಬಾರಿ ಒಟ್ಟಿಗೆ ಆಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News