×
Ad

ಹರ್ಜೀತ್ ಸಿಂಗ್ ನೇತೃತ್ವದ ಭಾರತ ತಂಡ ಆಯ್ಕೆ

Update: 2016-10-12 23:51 IST

ಹೊಸದಿಲ್ಲಿ, ಅ.12: ಹರ್ಜೀತ್ ಸಿಂಗ್ ನೇತೃತ್ವದ ಭಾರತದ ಜೂನಿಯರ್ ಹಾಕಿ ತಂಡ ಸ್ಪೇನ್‌ನ ವೆಲೆನ್ಸಿಯಾದಲ್ಲಿ ಅ.24 ರಿಂದ 30ರ ತನಕ ನಡೆಯಲಿರುವ ನಾಲ್ಕು ರಾಷ್ಟ್ರಗಳು ಭಾಗವಹಿಸುತ್ತಿರುವ ಜೂನಿಯರ್ ಹಾಕಿ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಸಜ್ಜಾಗಿದೆ.

 ಡಿಪ್ಸನ್ ಟಿರ್ಕಿ ಉಪ ನಾಯಕನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಿಯೋ ಒಲಿಂಪಿಕ್ಸ್‌ನಲ್ಲಿ ಪಿ.ಆರ್.ಶ್ರೀಜೇಶ್‌ರೊಂದಿಗೆ ಉಪ ನಾಯಕನಾಗಿ ಕಾರ್ಯನಿರ್ವಹಿಸಿದ್ದ ವಿಕಾಸ್ ದಹಿಯಾ ಹಾಗೂ ಸೂರಜ್ ಕರ್ಕೇರ ಗೋಲ್‌ಕೀಪರ್‌ಗಳಾಗಿ ಆಯ್ಕೆಯಾಗಿದ್ದಾರೆ.

ಆಸ್ಟ್ರೇಲಿಯನ್ ಹಾಕಿ ಲೀಗ್‌ನಲ್ಲಿ ಹ್ಯಾಟ್ರಿಕ್ ಸಹಿತ ಏಳು ಗೋಲುಗಳನ್ನು ಬಾರಿಸಿದ್ದ ವರುಣ್ ಕುಮಾರ್ ರಕ್ಷಣಾ ವಿಭಾಗದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ವರುಣ್‌ಗೆ ಗುರಿಂದರ್ ಸಿಂಗ್, ಡಿಪ್ಸನ್ ಟಿರ್ಕಿ, ಹರ್ಮನ್‌ಪ್ರೀತ್ ಸಿಂಗ್,ಹಾರ್ದಿಕ್ ಸಿಂಗ್ ಹಾಗೂ ಆನಂದ್ ಲಾಕ್ರ ಸಾಥ್ ನೀಡಲಿದ್ದಾರೆ.

ಮಿಡ್‌ಫೀಲ್ಡ್ ವಿಭಾಗದಲ್ಲಿ ನಾಯಕ ಹರ್ಜೀತ್, ನೀಲಕಂಠ ಶರ್ಮ, ಸಂತಾ ಸಿಂಗ್, ಸುಮಿತ್ ಹಾಗೂ ಶಂಶೇರ್ ಸಿಂಗ್ ಅವರಿದ್ದಾರೆ. ಇತ್ತೀಚೆಗೆ ಕೊನೆಗೊಂಡ ಆಸ್ಟ್ರೇಲಿಯನ್ ಹಾಕಿಯಲ್ಲಿ ನಾಲ್ಕು ಗೋಲುಗಳನ್ನು ಬಾರಿಸಿದ್ದ ಅರ್ಮಾನ್ ಖುರೇಶಿ ಫಾರ್ವರ್ಡ್ ಸರದಿ ಮುನ್ನಡೆಸಲಿದ್ದಾರೆ.

ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ 2013ರ ಜೂನಿಯರ್ ವಿಶ್ವ ಚಾಂಪಿಯನ್ ಜರ್ಮನಿಯನ್ನು ಎದುರಿಸಲಿದೆ. ಆ ನಂತರ ಬೆಲ್ಜಿಯಂ ಹಾಗು ಆತಿಥೇಯ ಸ್ಪೇನ್ ತಂಡವನ್ನು ಎದುರಿಸಲಿದೆ. ಹುಡುಗರು ಆಸ್ಟ್ರೇಲಿಯನ್ ಹಾಕಿ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ವೆಲೆನ್ಸಿಯಾದಲ್ಲಿ ಅಗ್ರ ಜೂನಿಯರ್ ತಂಡಗಳಾದ ಜರ್ಮನಿ, ಬೆಲ್ಜಿಯಂ ಹಾಗೂ ಸ್ಪೇನ್ ತಂಡವನ್ನು ಎದುರಿಸಲಿದ್ದೇವೆ. ಆಸ್ಟ್ರೇಲಿಯನ್ ಹಾಕಿ ಲೀಗ್‌ನಲ್ಲಿ ನಾವು ಕೆಲವು ವಿಷಯ ಕಲಿತ್ತಿದ್ದೇವೆ.

ಡಿಸೆಂಬರ್‌ನಲ್ಲಿ ಲಕ್ನೋದಲ್ಲಿ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸುವ ಮೊದಲು ಈಗಿನ ಸವಾಲನ್ನು ಎದುರಿಸಲು ಸಜ್ಜಾಗಬೇಕಾಗಿದೆ ಎಂದು ಭಾರತದ ಜೂನಿಯರ್ ಪುರುಷರ ತಂಡದ ಕೋಚ್ ಹರೇಂದ್ರ ಸಿಂಗ್ ತಿಳಿಸಿದ್ದಾರೆ.

ತಂಡ:

ಗೋಲ್‌ಕೀಪರ್‌ಗಳು: ವಿಕಾಸ್ ದಹಿಯಾ, ಸೂರಜ್ ಕರ್ಕೇರ.

ಡಿಫೆಂಡರ್‌ಗಳು: ವರುಣ್ ಕುಮಾರ್, ಡಿಪ್ಸನ್ ಟಿರ್ಕಿ(ಉಪನಾಯಕ), ಹಾರ್ದಿಕ್ ಸಿಂಗ್, ಗುರಿಂದರ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಆನಂದ್ ಲಾಕ್ರ.

ಮಿಡ್ ಫೀಲ್ಡರ್‌ಗಳು: ನೀಲಕಂಠ ಶರ್ಮ, ಹರ್ಜೀತ್ ಸಿಂಗ್(ನಾಯಕ), ಸಂತಾ ಸಿಂಗ್, ಸುಮಿತ್, ಶಂಶೀರ್ ಸಿಂಗ್.

ಫಾರ್ವರ್ಡ್‌ಗಳು: ಅರ್ಮಾನ್ ಖುರೇಷಿ, ಗುರ್ಜಂತ್ ಸಿಂಗ್, ಮನ್‌ಪ್ರೀತ್, ಪರ್ವಿಂದರ್ ಸಿಂಗ್, ಅಜಯ್ ಯಾದವ್, ಸಿಮ್ರಾನ್‌ಜೀತ್ ಸಿಂಗ್, ಅಜಿತ್ ಕುಮಾರ್ ಪಾಂಡೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News