×
Ad

ಕೊಲಂಬಿಯ ಆಟಗಾರ ರೋಡ್ರಿಗಝ್‌ಗೆ ಜೀವ ಬೆದರಿಕೆ

Update: 2016-10-12 23:56 IST

ಬೊಗೊಟಾ, ಅ.12: ಕೊಲಂಬಿಯಾ ಆಟಗಾರ ಜೇಮ್ಸ್ ರೋಡ್ರಿಗಝ್‌ಗೆ ಆನ್‌ಲೈನ್‌ನಲ್ಲಿ ಬೆದರಿಕೆ ಕರೆ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಟರ್ ತನಿಖೆ ಕೈಗೆತ್ತಿಕೊಂಡಿದ್ದಾರೆ.

ರೋಡ್ರಿಗಝ್‌ಗೆ ಜೀವ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ಪತ್ತೆ ಹಚ್ಚಲು ಅಟಾರ್ನಿ ಜನರಲ್ ಕಚೇರಿ ತನಿಖೆಯನ್ನು ಆರಂಭಿಸಿದೆ. ಬೆದರಿಕೆ ಹಾಕಿದ ವ್ಯಕ್ತಿಗೆ 8 ವರ್ಷ ಜೈಲು ಸಜೆ ಅನುಭವಿಸಬೇಕಾಗುತ್ತದೆ ಎಂದು ತನಿಖಾ ತಂಡದ ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.

 ರೋಡ್ರಿಗಝ್ ಹಾಗೂ ಅವರ ಸಂಬಂಧಿಯೊಬ್ಬರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವಬೆದರಿಕೆ ಹಾಕಲಾಗಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ಜೇಮ್ಸ್ ರೋಡ್ರಿಗಝ್ ಪ್ರಸ್ತುತ ಸ್ಪೇನ್‌ನಲ್ಲಿದ್ದು, ಆತನಿಗೆ ಕಳೆದ ಕೆಲವು ದಿನಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ರೋಡ್ರಿಗಝ್ ತಾಯಿ ಪಿಲರ್ ರುಬಿಯೊ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News