ಮುಂಬೈ ನಗರ ಸಭಾ ಚುನಾವಣೆ: ಬಿಜೆಪಿಗೆ ಉದ್ಧವ್ ಠಾಕ್ರೆ ಸವಾಲು
ಮುಂಬೈ, ಅಕ್ಟೋಬರ್ 13: ಮುಂಬೈ ನಗರಸಭಾ ಚುನಾವಣೆಯಲ್ಲಿ ಧೈರ್ಯವಿದ್ದರೆ ಒಬ್ಬಂಟಿಯಾಗಿ ಸ್ಪರ್ಧಿಸಿ ನೋಡಲಿ ಎಂದು ಬಿಜೆಪಿಗೆ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಸವಾಲು ಹಾಕಿದ್ದಾರೆಂದು ವರದಿಯಾಗಿದೆ. ದಸರಾ ಮೆರವಣಿಗೆಯ ವೇಳೆ ಅವರು ಭಾಷಣ ಮಾಡಿ ಸವಾಲುಹಾಕಿದ್ದು, ಮೋದಿಯನ್ನು ಹೊಗಳಿ ಬಿಜೆಪಿಯನ್ನು ನಿಷ್ಠುರವಾಗಿ ತೆಗಳಿದ್ದಾರೆ.ಮೈತ್ರಿ ತೊರೆದು ಬಿಜೆಪಿ ಒಬ್ಬಂಟಿಯಾಗಿ ಸ್ಪರ್ಧಿಸಿದರೆ ಶಿವಸೇನೆಯ ಸರ್ಜಿಕಲ್ ಸ್ಟ್ರೈಕ್ ಏನೆಂದು ತೋರಿಸಿಕೊಡಲಾಗುವುದು ಎಂದು ಉದ್ಧವ್ ಠಾಕ್ರೆ ಮುನ್ನೆಚ್ಚರಿಕೆ ನೀಡಿದ್ದಾರೆ.ಬಿಜೆಪಿಯೊಂದಿಗೆ ನಾವು ಸಂಬಂಧವನು ಕಡಿದುಕೊಳ್ಳುವುದಿಲ್ಲ. ಬಿಜೆಪಿ ಬೇಕಿದ್ದರೆ ತೊರೆಯುವುದರಲ್ಲಿ ಅಡ್ಡಿಯಿಲ್ಲ. ಯಾವುದೇ ಪರಿಸ್ಥಿತಿಯಲ್ಲಿಯೂ ಚುನಾವಣೆಗೆ ತೆರಳಲು ಸಿದ್ಧರಿರಬೇಕೆಂದು ಉದ್ಧವ್ ಪಾರ್ಟಿಯ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಯಾರೊಂದಿಗೂ ಮೈತ್ರಿಮಾಡದೆ ಸ್ವಂತಂತ್ರವಾಗಿ ಸ್ಪರ್ಧಿಸಲಿದೆ ಎಂದು ಬಿಜೆಪಿ ಸಂಸದ ಕಿರಿತ್ ಸೋಮಯ್ಯ ಇತ್ತೀಚೆಗೆ ನೀಡಿದ್ದ ಹೇಳಿಕೆ ಉದ್ಧವ್‌ರ ಕೋಪಕ್ಕೆ ಕಾರಣವಾಗಿದೆ. ಮಾರ್ಚ್‌ನಲ್ಲಿ ನಗರಸಭೆಗೆಚುನಾವಣೆ ನಡೆಯಲಿದೆ. ನಗರಸಭೆಗೆ ನಡೆಯಲಿರುವ ಚುನಾವಣೆ ಬಾಳ ಠಾಕ್ರೆಯವರ ನಿಧನಾನಂತರ ಶಿವಸೇನೆ ಎದುರಿಸುತ್ತಿರುವ ಅಗ್ನಿಪರೀಕ್ಷೆಯಾಗಿದೆ ಎಂದು ರಾಜಕೀಯ ಮೂಲಗಳು ಹೇಳಿವೆ ಎಂದು ವರದಿ ತಿಳಿಸಿವೆ.