ನೊಬೆಲ್ ವಿಜೇತ ಇಟಲಿ ನಾಟಕಕಾರ ನಿಧನ

Update: 2016-10-13 14:38 GMT

ರೋಮ್, ಅ. 13: ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದಿರುವ ಇಟಲಿಯ ನಾಟಕಕಾರ ಹಾಗೂ ನಟ ಡರಿಯೊ ಫೋ ನಿಧನರಾಗಿದ್ದಾರೆ ಎಂದು ಪ್ರಧಾನಿ ಮ್ಯಾಟಿಯೊ ರೆಂಝಿ ಗುರುವಾರ ಘೋಷಿಸಿದ್ದಾರೆ. ಅವರಿಗೆ 90 ವರ್ಷ ಪ್ರಾಯವಾಗಿತ್ತು.

ಎಡ ಪಂಥೀಯ ಚಿಂತಕರಾಗಿದ್ದ ಅವರಿಗೆ 1997ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು.

20ನೆ ಶತಮಾನದ ಪ್ರಹಸನ ಮತ್ತು ರಾಜಕೀಯ ರಂಗಭೂಮಿಯ ಮಹೋನ್ನತ ವ್ಯಕ್ತಿಗಳ ಪೈಕಿ ಓರ್ವರಾಗಿದ್ದ ಫೋ, ‘ಆ್ಯಕ್ಸಿಡೆಂಟಲ್ ಡೆತ್ ಆಫ್ ಆ್ಯನ್ ಅನಾರ್ಕಿಸ್ಟ್’ ಮತ್ತು ‘ಕಾಂಟ್ ಪೇ, ವೋಂಟ್ ಪೇ’ ಎಂಬ ಕೃತಿಗಳಿಗಾಗಿ ಪ್ರಸಿದ್ಧರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News