ಈಕೆ ರಾಜಸ್ತಾನದ ಮಾದಕ ಸಾಮ್ರಾಜ್ಯದ ರಾಣಿ !

Update: 2016-10-14 10:39 GMT

ಜೋಧ್‌ಪುರ, ಅಕ್ಟೋಬರ್ 14: ರಾಜಸ್ಥಾನದಲ್ಲಿ ಮಾದಕವಸ್ತು ಮಾರಾಟ ನಡೆಸುವ ರ‍್ಯಾಕೆಟ್ ನ ಮುಖ್ಯಸ್ಥೆ ಸುಮಿತ್ರಾ ಬಿಷ್ಣೋಯಿ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಅಫೀಮು ಮಾರಾಟ ನಡೆಸುವ ಮೂಲಕ ಈ ಮಹಿಳೆ ಅದ್ದೂರಿ ವಾಹನಗಳು ನಾಲ್ಕು ಮಹಡಿಯ ಬಂಗ್ಲೆ ಸಹಿತ ಅನೇಕ ಆಸ್ತಿಗಳನ್ನು ಮಾಡಿಕೊಂಡಿದ್ದಾಳೆ.

ಮೂವತ್ತೊಂದು ವರ್ಷದ ಯುವತಿಯಾಗಿರುವ ಸುಮಿತ್ರಾ ಅಫೀಮು ರ‍್ಯಾಕೆಟ್ ನ್ನು ನಿರ್ವಹಿಸುತ್ತಿದ್ದ ಮಹಿಳೆಯಾಗಿದ್ದು, ಬುಧವಾರ ಮಾದಕವಸ್ತು ಕಳ್ಳಸಾಗಾಟ ನಡೆಸುವ ವೇಳೆ ಇಬ್ಬರನ್ನುಪೊಲೀಸರು ಬಂಧಿಸುವ ಮೂಲಕ ಈಕೆಯ ಕರಾಳ ವ್ಯವಹಾರ ಬೆಳಕಿಗೆ ಬಂದಿದೆ. ಬಂಧಿಸಲ್ಪಟ್ಟ ಆರೋಪಿಗಳು ಸುಮಿತ್ರಾಳಿಗಾಗಿ ಅಫೀಮು ಸಾಗಾಟ ನಡೆಸುತ್ತಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದರು. ನಂತರ ಐವತ್ತು ಪೊಲೀಸರಿದ್ದ ತಂಡ ಜೋಧ್‌ಪುರ್‌ನ ಬೊರಾನದಲ್ಲಿರುವ ಸುಮಿತ್ರಾರ ವಸತಿಗೆ ದಾಳಿ ಮಾಡಿ ಆಕೆಯನ್ನು ಬಂಧಿಸಿದೆ.

76 ಗ್ರಾಂ ಅಫೀಮನ್ನು ಪೊಲೀಸರು ಸುಮಿತ್ರಾರಿಂದ ಈ ವೇಳೆ ವಶಪಡಿಸಿಕೊಂಡಿದ್ದಾರೆ. ಜಿಪಿಎಸ್ ಸಿಸ್ಟಂ, ಮಾದಕವಸ್ತು ರವಾನೆಗೆ ಬಳಸುವ ವಾಹನಗಳನ್ನುಪೊಲೀಸರು ಸೀಲ್ ಮಾಡಿದ್ದಾರೆ. ಸುಮಿತ್ರಾ ಬಿಷ್ಣೋಯಿ ಮತ್ತು ಆಕೆಯ ನಾಲ್ವರು ಸಹಾಯಕರನ್ನು ಪೊಲೀಸರು ಬಂಧಿಸಿದ್ದು ಈ ರ‍್ಯಾಕೆಟ್ ನ ಇತರ ಸದಸ್ಯರಿಗಾಗಿ ಬಲೆಬೀಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News