ಧಾರ್ಮಿಕ ಸೌಹಾರ್ದ ಮೆರೆಯುವ ಕಾಶ್ಮೀರದ ಎರಡು ಗ್ರಾಮಗಳು

Update: 2016-10-14 10:36 GMT

ಶ್ರೀನಗರ ಅಕ್ಟೋಬರ್ 14: ಕಾಶ್ಮೀರದಲ್ಲಿ ಧಾರ್ಮಿಕ ಸೌಹಾರ್ದಕ್ಕೆ ಬೆದರಿಕೆಯಿದೆ ಎಂದು ಎಷ್ಟೇ ಪ್ರಚಾರ ನಡೆಯುತ್ತಿದ್ದರೂ ಪುಲ್ವಾಮಜಿಲ್ಲೆಯ ಎರಡು ನೆರೆಯ ಗ್ರಾಮಗಳು ತಮ್ಮ ಸೌಹಾರ್ದದ ಮೂಲಕ ತಕ್ಕ ಉತ್ತರ ನೀಡುತ್ತಿವೆ ಎಂದು ವರದಿಯೊಂದು ತಿಳಿಸಿದೆ.ತಹಾಬ್ ಗ್ರಾಮದ ಆಶು ತಿಕುವು ಮತ್ತು ಲೊಸ್ವಾನಿ ಗ್ರಾಮದ ನಿಶು ಪಂಡಿತ್‌ರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದವರು ಗ್ರಾಮದ ಧಾರ್ಮಿಕ ಸೌಹಾರ್ದವನ್ನು ಕಂಡು ಪುಳಕಿತರಾಗಿದ್ದಾರೆ. ವೇದಿಕೆ ಸಿದ್ಧಪಡಿಸಲು ಮತ್ತು ಅತಿಥಿಗಳನ್ನು ಸತ್ಕರಿಸಲು ಗ್ರಾಮಗಳ ಮುಸ್ಲಿಂ, ಸಿಖ್ ಗೆಳೆಯರು ಪರಸ್ಪರ ಸ್ಪರ್ಧಿಸುತ್ತಿರುವುದನ್ನು ನೋಡಿ ಮದುವೆಗೆ ಬಂದ ಅತಿಥಿಗಳು ಪುಳಕಿತರಾದರು. ಎನ್ನಲಾಗಿದೆ.

 ಮದುವೆಯಲ್ಲಿ ಪರಂಪರಾಗತ ವನ್‌ಪೂನ್ ಹಾಡನ್ನು ಮುಸ್ಲಿಂ ಮಹಿಳೆಯರು ಹಾಡಿದ್ದಾರೆ. ಸಮಾರಂಭವನ್ನು ಯಶಸ್ವಿಯಾಗಿ ಸಂಘಟಿಸಿದ ಬಳಿಕ ಮತ್ತು ಮನೆ ಪರಿಸರವನ್ನೆಲ್ಲ ಶುಚಿಗೊಳಿಸಿದ ಬಳಿಕ ಮುಸ್ಲಿಂ, ಸಿಖ್ ನೆರೆಹೊರೆಯವರು ನವ ದಂಪತಿಗಳಿಗೆ ಶುಭಾಶಯ ಸಲ್ಲಿಸಿ ಹೊರಟು ಹೋಗಿದ್ದಾರೆ. ಇವೆಲ್ಲ ಮದುವೆ ಸಮಾರಂಭಕ್ಕೆ ಕಾಶ್ಮೀರದ ಹೊರಗಿನಿಂದ ಬಂದ ಪಂಡಿತ್‌ಗಳಿಗೆ ಅಚ್ಚರಿಯುಂಟು ಮಾಡಿತ್ತು. ಆದರೆ ನಾವು ವಿಶೇಷವಾದ ಏನನ್ನೂ ಮಾಡಿಲ್ಲ ಎಂದು ಗ್ರಾಮನಿವಾಸಿಗಳು ಹೇಳುತ್ತಾರೆ. ಸ್ವಯಂ ಊರವರು ಪರಸ್ಪರ ಸಹಕಾರ ನೀಡುವುದನ್ನು ಮಾತ್ರ ನೋಡಿದ್ದೇವೆ ಅದು ಕಾಶ್ಮೀರಿಯತೆಯ ಭಾಗವಾಗಿದೆ ಎಂದು ಸಿಖ್ ಮುಸ್ಲಿಂ ಗ್ರಾಮ ನಿವಾಸಿಗಳು ಪ್ರತಿಕ್ರಿಯಿಸಿದ್ದಾರೆ.

 ಮೂರು ತಿಂಗಳಿಗೂ ಹೆಚ್ಚು ಸಮಯದಿಂದ ಕಾಶ್ಮೀರ ಸಂಘರ್ಷ ಭರಿತವಾಗಿದೆ. ಮೊದಲೇ ನಿಶ್ಚಿತವಾಗಿದ್ದ ಮದುವೆ ಸಮಾರಂಭಗಳನ್ನು ಮುಂದೂಡಿದ ಕುರಿತು ವರದಿಯಾಗಿದ್ದವು. ಆದರೆ ತಹಾಬ್‌ಮತ್ತುಲೊಸ್ವಾನಿಯಲ್ಲಿ ಧಾರ್ಮಿಕಸೌಹಾರ್ದ ಭಾವೈಕ್ಯತೆ ಕಂಡು ಬಂದಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News