ರಾಜ್ಯದೊಳಗಿನಿಂದಲೂ ಭಯೋತ್ಪಾದನೆಯ ಬೆದರಿಕೆ ಕೇಳುತ್ತಿದೆ: ಕೇರಳ ಮುಖ್ಯಮಂತ್ರಿ
Update: 2016-10-14 17:09 IST
ತಿರುವನಂತಪುರಂ,ಅಕ್ಟೋಬರ್ 14: ಭಯೋತ್ಪಾದನೆಯ ಬೆದರಿಕೆ ಹೊರಗಿನಿಂದ ಮಾತ್ರವಲ್ಲ ರಾಜ್ಯದೊಳಗಿನಿಂದಲೂ ಕೇಳಿ ಬರುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವುದಾಗಿ ವರದಿಯಾಗಿದೆ. ಜನರ ನಡುವೆ ಕೋಮು ಭೇದಭಾವ ಉಂಟು ಮಾಡುವ ಶ್ರಮ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ತಿರುವನಂತಪುರಂ ಎಂಎಸ್‌ಪಿ ಶಿಬಿರದಲ್ಲಿ ತರಬೇತಿ ಪೂರ್ಣವಾದ ಪೊಲೀಸರ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಅವರು ಮಾತಾಡುತ್ತಿದ್ದರು.
ಪೊಲೀಸರು ಜನರೊಂದಿಗೆ ಗೌರವಪೂರ್ಣವಾಗಿ ವರ್ತಿಸಬೇಕು. ಅವರು ಭ್ರಷ್ಟಾಚಾರ, ವಂಶವಾದಿಗಳಾಗಬಾರದು. ಬೇಲಿಯೆ ಬೆಳೆಯನ್ನು ಮೇಯುವ ಅವಸ್ಥೆಗೆ ಅವಕಾಶ ನೀಡುವುದಿಲ್ಲ. ಭ್ರಷ್ಟಾಚಾರವನ್ನು ಕೂಡಾ ಸಹಿಸುವುದಿಲ್ಲ. ಕಠಿಣಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಸೇನೆಯ ಶಕ್ತಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡಲು ಬೇಕಾಗಿದೆ ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಹೇಳಿದ್ದಾರೆಂದು ವರದಿ ತಿಳಿಸಿದೆ.