ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿಯನ್ನು ತಳ್ಳಿಹಾಕಿದ ಬಿಎಸ್‌ಪಿ

Update: 2016-10-14 16:53 GMT

ಲಕ್ನೋ,ಅ.14: ಮುಂದಿನ ವರ್ಷದ ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿ ಯೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿರುವ ಬಿಎಸ್‌ಪಿಯು, ಕೇಸರಿ ಪಕ್ಷಕ್ಕೆ ನೆರವಾಗಲು ಸಮಾಜವಾದಿ ಪಕ್ಷವು ಮುಸ್ಲಿಮರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಸೀಮುದ್ದೀನ್ ಸಿದ್ದಿಕಿ ಅವರು ಈ ಸ್ಪಷ್ಟನೆಯನ್ನು ನೀಡಿದರು.

 ಬಿಜೆಪಿ ಮತ್ತು ಎಸ್‌ಪಿ ಪರಸ್ಪರ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸುತ್ತಿವೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಎಸ್‌ಪಿ ಪ್ರಬಲವಾಗಿದ್ದಾಗೆಲ್ಲ ಬಿಜೆಪಿಯು ಬಲ ವರ್ಧಿಸಿಕೊಂಡಿದೆ ಮತ್ತು ಬಿಎಸ್‌ಪಿ ಪ್ರಬಲವಾಗಿದ್ದಾಗ ಬಿಜೆಪಿಯು ದುರ್ಬಲಗೊಳ್ಳುತ್ತದೆ ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News