×
Ad

ಅಜಯ್ ಜಯರಾಮ್ ಕ್ವಾರ್ಟರ್ ಫೈನಲ್‌ಗೆ

Update: 2016-10-14 23:54 IST

 ಅಲ್ಮೆರೆ, ಅ.14: ಡಚ್ ಓಪನ್ ಗ್ರಾನ್ ಪ್ರಿ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಹಾಲಿ ಚಾಂಪಿಯನ್ ಅಜಯ್ ಜಯರಾಮ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಅಗ್ರ ಶ್ರೇಯಾಂಕದ ಜಯರಾಮ್ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ನಾರ್ವೆಯ ಮಾರಿಯಸ್ ಮೈಹ್ರೆ ವಿರುದ್ಧ 21-6, 21-6 ನೇರ ಸೆಟ್‌ಗಳಿಂದ ಸುಲಭ ಜಯ ಸಾಧಿಸಿದರು. ಜಯರಾಮ್ ಮುಂದಿನ ಸುತ್ತಿನಲ್ಲಿ ಬ್ರೆಝಿಲ್‌ನ ಯಗೊರ್ ಕೊಯೆಲ್ಹೊ ಒಲಿವೆರಾರನ್ನು ಎದುರಿಸಲಿದ್ದಾರೆ.

ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಭಾರತದ 11ನೆ ಶ್ರೇಯಾಂಕದ ಆಟಗಾರ ಪಿ.ಕಶ್ಯಪ್ ಇಸ್ಟೋನಿಯದ ರಾವುಲ್ ಮಸ್ಟ್ ವಿರುದ್ದ18-21, 18-21 ಸೆಟ್‌ಗಳಿಂದ ಸೋತಿದ್ದಾರೆ.

ಮಿಶ್ರ ಡಬಲ್ಸ್ ಜೋಡಿ ಬಿ.ಸುಮೀತ್ ರೆಡ್ಡಿ ಹಾಗೂ ಮೇಘನಾ ಹಾಲೆಂಡ್‌ನ ಜೆಲ್ಲಿ ಮಾಸ್ ಹಾಗೂ ಇಮ್ಕೆ ವ್ಯಾನ್ ಡೆರ್‌ರನ್ನು 21-16, 21-8 ಸೆಟ್‌ಗಳ ಅಂತರದಿಂದ ಸೋಲಿಸಿ ಮುಂದಿನ ಸುತ್ತಿಗೆ ತಲುಪಿದರು.

ಪುರುಷರ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಮನು ಅತ್ರಿ ಹಾಗು ಬಿ.ಸುಮೀತ್ ರೆಡ್ಡಿ ಹಾಲೆಂಡ್‌ನ ಜಾಕೊ ಅರೆಂಡ್ಸ್ ಹಾಗೂ ರುಬೆನ್ ಜಿಲ್ಲಿ ವಿರುದ್ಧ 19-21, 19-21 ಸೆಟ್‌ಗಳ ಅಂತರದಿಂದ ಶರಣಾಗಿದ್ದಾರೆ.

ಮಹಿಳೆಯರ ಡಬಲ್ಸ್‌ನಲ್ಲಿ ಮೈಕೆನ್ ಫ್ರುಗಾರ್ಡ್ ಹಾಗು ಸಾರಾ ಥಿಗೆಸೆನ್ ಜೋಡಿ ಭಾರತದ ಮೇಘನಾ ಹಾಗೂ ಪೂರ್ವಿಶಾ ರಾಮ್ ವಿರುದ್ಧ 21-10, 21-9 ಸೆಟ್‌ಗಳಿಂದ ಮಣಿಸಿದ್ದಾರೆ.

ಇದಕ್ಕೆ ಮೊದಲು ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಜಯರಾಮ್ ಹಾಗೂ ಕಶ್ಯಪ್ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದಾರೆ.

 ಜಯರಾಮ್ 2ನೆ ಸುತ್ತಿನ ಪಂದ್ಯದಲ್ಲಿ ಬಲ್ಗೇರಿಯದ ಫಿಲಿಪ್ ಶೀಸೊವ್‌ರನ್ನು 21-7, 21-9 ಸೆಟ್‌ಗಳ ಅಂತರದಿಂದ ಮಣಿಸಿದರು. ಮತ್ತೊಂದು 2ನೆ ಸುತ್ತಿನ ಪಂದ್ಯದಲ್ಲಿ ಕಶ್ಯಪ್ ಡೆನ್ಮಾರ್ಕ್‌ನ ರಸ್ಮಸ್ ಗೆಮ್ಕೆರನ್ನು 50 ನಿಮಿಷಗಳ ಹೋರಾಟದಲ್ಲಿ 21-11, 7-21, 21-10 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News