ಸೌರಭ್ ವರ್ಮ ಸೆಮಿ ಫೈನಲ್‌ಗೆ

Update: 2016-10-14 18:25 GMT

 ತೈಪೆ ಸಿಟಿ, ಅ.14: ಭಾರತದ ಶಟ್ಲರ್ ಸೌರಭ್ ವರ್ಮ ಚೈನೀಸ್ ತೈಪೆ ಜಿಪಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಸತತ ಮೂರನೆ ಬಾರಿ ಫೈನಲ್‌ಗೆ ತಲುಪಲು ಇನ್ನೊಂದು ಪಂದ್ಯ ಗೆಲ್ಲುವ ಅಗತ್ಯವಿದೆ.

ಶುಕ್ರವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸೌರಭ್ ಅವರು ಜಪಾನ್‌ನ ಕೆಂಟೊ ಹೊರಿಯುಚಿ ಅವರನ್ನು 31 ನಿಮಿಷಗಳ ಹೋರಾಟದಲ್ಲಿ 7-11, 11-1, 11-3, 11-7 ಗೇಮ್‌ಗಳ ಅಂತರದಿಂದ ಮಣಿಸಿದರು.

55,000 ಡಾಲರ್ ಬಹುಮಾನ ಮೊತ್ತದ ಟೂರ್ನಿಯಲ್ಲಿ ಫೈನಲ್‌ಗೆ ಸ್ಥಾನ ಪಡೆಯಲು ಮುಂದಿನ ಸುತ್ತಿನಲ್ಲಿ ಚೈನೀಸ್ ತೈಪೆಯ ಸು ಜೆನ್ ಹಾವೊರನ್ನು ಎದುರಿಸಲಿದ್ದಾರೆ.

2011ರ ನ್ಯಾಶನಲ್ ಚಾಂಪಿಯನ್ ಸೌರಭ್ ಅವರು ಹಾವೊ ವಿರುದ್ಧ ಆಡಿರುವ ಮೂರೂ ಪಂದ್ಯಗಳನ್ನು ಗೆದ್ದುಕೊಂಡಿದ್ದು, ಶನಿವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲೂ ಜಯ ಸಾಧಿಸುವ ವಿಶ್ವಾಸದಲ್ಲಿದ್ದಾರೆ.

........

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News