×
Ad

ಹಾಲಿವುಡ್ ದಿಗ್ಗಜರ ನಡುವೆ ಮಿಂಚಿದ ಭಾರತೀಯ ನಟ

Update: 2016-10-15 09:58 IST

ಲಂಡನ್, ಅ.15: ಹಲವು ಮಂದಿ ಹಾಲಿವುಡ್ ತಾರೆಯರ ನಡುವೆ ಭಾರತೀಯ ನಟ ’ಇನ್ಫೆರ್ನೊ’ ಖಾನ್ ಮಿಂಚುವ ಮೂಲಕ ಸುದ್ದಿ ಮಾಡಿದ್ದಾರೆ, ಡಾನ್ ಬ್ರೌನ್ ಅವರ ಇನ್ಫೆರ್ನೊ ಹೆಸರಿನ ಚಿತ್ರದ ಮೂಲಕ ಸುದ್ದಿಮಾಡಿದ ಈ ಅಪೂರ್ವ ಪ್ರತಿಭೆಯ ನಟ, ದಶಕಗಳ ಹಿಂದಿನ ದ ಡಾವಿಂಚಿ ಕೋಡ್‌ನ ಎಲ್ಲ ಒಳ್ಳೆಯ ಅಂಶಗಳನ್ನು ಪ್ರತಿಬಿಂಬಿಸಿದ್ದಾರೆ.

ಹಲವು ಇತಿಮಿತಿಗಳ ನಡುವೆಯೂ ರಾನ್ ಹೋವಾರ್ಡ್ ಅವರ ಇನ್ಫೆರ್ನೊ ಸಂಚಲನ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ, ಈ ಅಪೂರ್ವ ಪ್ರತಿಭೆಯ ನಟ ಪ್ರದರ್ಶಿಸಿರುವ ಅಮೋಘ ನಟನಾ ಕೌಶಲ್ಯ.

ನಾಯಕನಟ ರಾಬರ್ಟ್ ಲಂಗ್ಡನ್ (ಟಾಮ್ ಹಂಕ್ಸ್) ನಟಿ ಫೆಲಿಸಿಟಿ ಜೋನ್ಸ್ ಜತೆ ಕಾಣಿಸಿಕೊಂಡಿದ್ದಾರೆ. ಇರ್ಫಾನ್ ಖಾನ್ ಈ ಚಿತ್ರದ ಮೂಲಕ ಭಾರಿ ಸುದ್ದಿ ಮಾಡಿದ್ದಾರೆ. ಚಿತ್ರ ಹಾಲಿವುಡ್ ವಿಮರ್ಶೆಗಳಲ್ಲಿ ಅಪಾರ ಮೆಚ್ಚುಗೆ ಪಡೆದಿದೆ.

ಅಮೆರಿಕದಲ್ಲಿ ಬಿಡುಗಡೆಯಾಗುವ ಎರಡು ವಾರ ಮುನ್ನವೇ ಭಾರತದಲ್ಲಿ ಬಿಡುಗಡೆಗೊಂಡಿರುವ ಈ ಚಿತ್ರ, ಭಾರತದಲ್ಲಿ ಹಿಂದಿ, ತೆಲುಗು ಹಾಗೂ ತಮಿಳುಭಾಷೆಯಲ್ಲಿ ಲಭ್ಯ. ಭಾರತೀಯ ವಿಶಾಲ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ತಂತ್ರ ಅನುಸರಿಸಲಾಗಿದೆ. ಭಾರತದ ಜನಸಂಖ್ಯಾ ಸ್ಫೋಟ ಈ ಚಿತ್ರದ ಮೂಲ ವಸ್ತುವೂ ಹೌದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News