ಭಾರತದ ಮಹಿಳಾ ತಂಡಕ್ಕೆ ಸೋನಿಕಾ ನಾಯಕಿ
ಹೊಸದಿಲ್ಲಿ, ಅ.15: ಐದು ರಾಷ್ಟ್ರಗಳು ಭಾಗವಹಿಸುತ್ತಿರುವ ಇಂಟರ್‌ನ್ಯಾಶನಲ್ ಜೂನಿಯರ್ ಹಾಕಿ ಟೂರ್ನಮೆಂಟ್‌ನಲ್ಲಿ 20 ಸದಸ್ಯೆಯರನ್ನು ಒಳಗೊಂಡ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಮಿಡ್ ಫೀಲ್ಡರ್ ಸೋನಿಕಾ ತಂಡವನ್ನು ನಾಯಕಿಯಾಗಿ ಮುನ್ನಡೆಸಲಿದ್ದಾರೆ.
ಹಾಕಿ ಟೂರ್ನಮೆಂಟ್ ಸ್ಪೇನ್‌ನ ವೆಲೆನ್ಸಿಯಾದಲ್ಲಿ ಅ.24 ರಿಂದ 30ರ ತನಕ ನಡೆಯಲಿದೆ.
ಮುಂಬರುವ ಟೂರ್ನಿಗೆ ರಶ್ಮಿತಾ ಮಿಂಝ್ ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ದಿವ್ಯಾ ಹಾಗೂ ಸೋನಾಲ್ ಗೋಲ್‌ಕೀಪರ್‌ಗಳಾಗಿಯೂ, ರಿತು, ಗಗನ್‌ದೀಪ್ ಕೌರ್, ಮಹಿಮಾ ಚೌಧರಿ, ಅಸ್ಮಿತಾ ಬಾರಿಯಾ ಹಾಗೂ ಸಲಿಮಾ ಡಿಫೆನ್ಸ್ ವಿಭಾಗದಲ್ಲಿದ್ದಾರೆ.
ಮಿಡ್ ಫೀಲ್ಡ್ ವಿಭಾಗದಲ್ಲಿ ತ್ರಿವಳಿ ಕೌರ್‌ಗಳಾದ ಮನ್‌ಪ್ರೀತ್, ನವನೀತ್ ಹಾಗೂ ನವ್‌ಪ್ರೀತ್, ಕರಿಶ್ಮಾ ಯಾದವ್ ಹಾಗೂ ಉದಿತಾ ಅವರಿದ್ದಾರೆ.
ಅಲ್ಕಾ ಡಂಗ್‌ಡಂಗ್, ಜ್ಯೋತಿ, ಪೂಜಾ ಯಾದವ್, ಅಮರಿಂದರ್ ಕೌರ್ ಫಾರ್ವರ್ಡ್ ಲೈನ್‌ನಲ್ಲಿದ್ದಾರೆ. ‘‘ಈ ಟೂರ್ನಿಯು ನಮ್ಮ ಮಹಿಳಾ ತಂಡಕ್ಕೆ ಅಗ್ರ ಯುರೋಪಿಯನ್ ತಂಡಗಳೊಂದಿಗೆ ಆಡಲು ಉತ್ತಮ ಅವಕಾಶವಾಗಿದ್ದು, ಹೆಚ್ಚಿನ ಆಟಗಾರ್ತಿಯರಿಗೆ ಇದು ಮೊದಲ ಅಂತಾರಾಷ್ಟ್ರೀಯ ಟೂರ್ನಿ. ಎಲ್ಲ ಆಟಗಾರ್ತಿಯರು ಭೋಪಾಲ್‌ನ ಸಾಯ್ ಸೆಂಟರ್‌ನಲ್ಲಿ ಕಠಿಣ ತರಬೇತಿ ನಡೆಸಿದ್ದಾರೆ. ಭಾರತೀಯ ಮಹಿಳಾ ಹಾಕಿ ತಂಡದ ಮುಖ್ಯಸ್ಥ ನೀಲ್ ಹೌವುಡ್ ಮಾರ್ಗದರ್ಶನದಲ್ಲಿ ಆಟಗಾರ್ತಿಯರಿಗೆ ತರಬೇತಿ ನೀಡಲಾಗಿದೆ’’ಎಂದು ಭಾರತೀಯ ಜೂನಿಯರ್ ಮಹಿಳಾ ತಂಡದ ಕೋಚ್ ಬಲ್ಜೀತ್ ಸಿಂಗ್ ಸೈನಿ ಹೇಳಿದ್ದಾರೆ.
ಹಾಕಿ ತಂಡ:
ಗೋಲ್‌ಕೀಪರ್‌ಗಳು: ದಿವ್ಯಾ, ಸೋನಾಲ್ ಮಿಂಝ್.
ಡಿಫೆಂಡರ್‌ಗಳು: ಸಲಿಮಾ, ಅಸ್ಮಿತಾ ಬಾರ್ಲ, ರಶ್ಮಿತಾ ಮಿಂಝ್(ಉಪ-ನಾಯಕಿ), ರಿತು, ಮಹಿಮಾ ಚೌಧರಿ, ಗಗನ್‌ದೀಪ್ ಕೌರ್.
ಮಿಡ್ ಫೀಲ್ಡರ್‌ಗಳು: ಉದಿತಾ, ಮನ್‌ಪ್ರೀತ್ ಕೌರ್, ಕರಿಶ್ಮಾ ಯಾದವ್, ನವ್‌ಪ್ರೀತ್ ಕೌರ್, ಸೋನಿಕಾ(ನಾಯಕಿ), ನವ್‌ನೀತ್ ಕೌರ್.
ಫಾರ್ವರ್ಡ್‌ಗಳು: ಜ್ಯೋತಿ, ಪೂಜಾ ಯಾದವ್, ಅಲ್ಕಾ ಡಂಗ್‌ಡಂಗ್, ಸಂಗೀತಾ ಕುಮಾರಿ, ಅಮರಿಂದರ್ ಕೌರ್, ಜ್ಯೋತಿ ಗುಪ್ತಾ.