ಕರ್ನಾಟಕದ ವಿರುದ್ಧ ಜಾರ್ಖಂಡ್ ಹೋರಾಟ

Update: 2016-10-15 17:41 GMT

ಗ್ರೇಟರ್‌ನೊಯ್ಡ, ಅ.15: ಇಶಾನ್ ಕಿಶನ್ ಅಜೇಯ ಶತಕ ಹಾಗೂ ಸೌರಭ್ ತಿವಾರಿ ಅರ್ಧಶತಕದ ಬೆಂಬಲದಿಂದ ಜಾರ್ಖಂಡ್ ತಂಡ ಕರ್ನಾಟಕ ವಿರುದ್ಧದ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 309 ರನ್ ಗಳಿಸಿದೆ.

ಕರ್ನಾಟಕದ ಪ್ರಥಮ ಇನಿಂಗ್ಸ್ 577 ರನ್‌ಗೆ ಉತ್ತರವಾಗಿ ವಿಕೆಟ್ ನಷ್ಟವಿಲ್ಲದೆ 9 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ಜಾರ್ಖಂಡ್ ತಂಡ ದಿನದಾಟದಂತ್ಯಕ್ಕೆ 309 ರನ್ ಗಳಿಸಿದ್ದು, ಕರ್ನಾಟಕದ ಇನಿಂಗ್ಸ್‌ಗಿಂತ 268 ರನ್ ಹಿನ್ನಡೆಯಲ್ಲಿದೆ.

 ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕಿಶನ್(ಅಜೇಯ 118 ರನ್, 148 ಎಸೆತ, 13 ಬೌಂಡರಿ, 5 ಸಿಕ್ಸರ್) ಹಾಗೂ ನದೀಮ್(13) ಕ್ರೀಸ್ ಕಾಯ್ದುಕೊಂಡಿದ್ದಾರೆ.

 ಜಾರ್ಖಂಡ್ ಶನಿವಾರ 3ನೆ ದಿನದಾಟ ಆರಂಭವಾದ ತಕ್ಷಣವೇ ಆರಂಭಿಕ ಆಟಗಾರ ಗೌತಮ್(01) ವಿಕೆಟ್ ಕಳೆದುಕೊಂಡಿತು. ವಿರಾಟ್ ಸಿಂಗ್(10) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆನಂದ್ ಸಿಂಗ್(45) ಹಾಗೂ ತಿವಾರಿ(91) 3ನೆ ವಿಕೆಟ್‌ಗೆ 66 ರನ್ ಸೇರಿಸಿ ತಂಡವನ್ನು ಆಧರಿಸಿದರು. ಈ ಜೋಡಿಯನ್ನು ಬಿನ್ನಿ ಬೇರ್ಪಡಿಸಿದರು.

ಅಜೇಯ 118 ರನ್ ಗಳಿಸಿರುವ ವಿಕೆಟ್‌ಕೀಪರ್ ಕಿಶನ್ ಜಾರ್ಖಂಡ್‌ಗೆ ಆಸರೆಯಾಗಿ ನಿಂತಿದ್ದಾರೆ. ಕರ್ನಾಟಕದ ಪರವಾಗಿ ವೇಗದ ಬೌಲರ್ ಅಭಿಮನ್ಯು ಮಿಥುನ್(2-54) ಯಶಸ್ವಿ ಬೌಲರ್ ಎನಿಸಿಕೊಂಡರು.

ಕಾಶ್ಮೀರ, ಹಿಮಾಚಲ ಪ್ರದೇಶ, ರಾಜಸ್ಥಾನಕ್ಕೆ ಜಯ

ಸೂರತ್, ಅ.15: ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಹಾಗು ರಾಜಸ್ಥಾನ ತಂಡಗಳು ರಣಜಿ ಟ್ರೋಫಿಯ 3ನೆ ದಿನವಾದ ಶನಿವಾರ ಜಯ ದಾಖಲಿಸಿವೆ.

 ಸಿ ಗುಂಪಿನ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡ ಗೋವಾದ ವಿರುದ್ಧ 116 ರನ್‌ಗಳ ಅಂತರದಿಂದ ಜಯ ಸಾಧಿಸಿದೆ. ಗೆಲ್ಲಲು 412 ರನ್ ಗುರಿ ಪಡೆದಿದ್ದ ಗೋವಾ ತಂಡ 295 ರನ್‌ಗೆ ಆಲೌಟಾಯಿತು.

ಕೋಲ್ಕತಾದಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಹಿಮಾಚಲ ಪ್ರದೇಶ ತಂಡ ಕೇರಳದ ವಿರುದ್ಧ 6 ವಿಕೆಟ್‌ಗಳ ಅಂತರದ ಜಯ ಸಾಧಿಸಿತು. ಗೆಲ್ಲಲು 103 ರನ್ ಗುರಿ ಪಡೆದ ಹಿಮಾಚಲ ಪ್ರದೇಶ 4 ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು.

 ವಿಶಾಖಪಟ್ಟಣದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ರಾಜಸ್ಥಾನ ತಂಡ ಅಸ್ಸಾಂನ ವಿರುದ್ಧ ಇನಿಂಗ್ಸ್ ಹಾಗೂ 8 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿದೆ.

ರಾಜಸ್ಥಾನ ಮೊದಲ ಇನಿಂಗ್ಸ್‌ನಲ್ಲಿ 272 ರನ್ ಗಳಿಸಿ ಆಲೌಟಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ 195 ರನ್ ಗಳಿಸಿದ ಅಸ್ಸಾಂ ಫಾಲೋ-ಆನ್‌ಗೆ ಸಿಲುಕಿತು. ಮತ್ತೊಮ್ಮೆ ಬ್ಯಾಟಿಂಗ್ ಮಾಡಿದ ಅಸ್ಸಾಂ ತಂಡ ವೇಗಿ ಪಂಕಜ್ ಸಿಂಗ್(4-26)ಹಾಗೂ ಎ. ಚೌಧರಿ(5-35) ದಾಳಿಗೆ ಸಿಲುಕಿ 20.2 ಓವರ್‌ಗಳಲ್ಲಿ ಕೇವಲ 69 ರನ್‌ಗೆ ಆಲೌಟಾಗಿ ಹೀನಾಯ ಸೋಲನುಭವಿಸಿತು. ಮೊದಲ ಇನಿಂಗ್ಸ್‌ನಲ್ಲಿ 39 ರನ್‌ಗೆ 5 ವಿಕೆಟ್‌ಗಳನ್ನು ಉರುಳಿಸಿದ್ದ ಪಂಕಜ್ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ ಪ್ರಥಮ ಇನಿಂಗ್ಸ್: 172 ಓವರ್‌ಗಳಲ್ಲಿ 577/6 ಡಿಕ್ಲೇರ್

ಜಾರ್ಖಂಡ್ ಪ್ರಥಮ ಇನಿಂಗ್ಸ್: 96 ಓವರ್‌ಗಳಲ್ಲಿ 309/6

( ಇಶಾನ್ ಕಿಶನ್ 118, ಸೌರಭ್ ತಿವಾರಿ 91, ಆನಂದ್ ಸಿಂಗ್ 45, ಮಿಥೂನ್ 2-54)

 ರಣಜಿ ಟ್ರೋಫಿ 3ನೆ ದಿನದ ಫಲಿತಾಂಶ

ಕಲ್ಯಾಣಿ: ಛತ್ತೀಸ್‌ಗಡ 394, ಆಂಧ್ರ 199, 122/4

ವಿಶಾಖಪಟ್ಟಣ: ರಾಜಸ್ಥಾನ 272, ಅಸ್ಸಾಂ 195, 69

ರಾಜಸ್ಥಾನಕ್ಕೆ ಇನಿಂಗ್ಸ್ ಹಾಗೂ 8 ರನ್ ಜಯ

 ದಿಲ್ಲಿ: ಮುಂಬೈ 323, ಬರೋಡ 305, 321/5

ಜೈಪುರ: ಉತ್ತರ ಪ್ರದೇಶ 410, ಬಂಗಾಳ 466, 30/0

ಸೂರತ್: ಜಮ್ಮು-ಕಾಶ್ಮೀರ 227,261 ಗೋವಾ 77, 295

 ಜಮ್ಮು-ಕಾಶ್ಮೀರಕ್ಕೆ 116 ರನ್ ಜಯ

ಜೆಮ್ಶೆಡ್‌ಪುರ: ಹರ್ಯಾಣ 331, ಹೈದರಾಬಾದ್ 191, 102/5

ನೊಯ್ಡ: ಜಾರ್ಖಂಡ್ 309/6, ಕರ್ನಾಟಕ 577/6 ಡಿಕ್ಲೇರ್

ಕೋಲ್ಕತಾ: ಹಿಮಾಚಲ ಪ್ರದೇಶ 261, 103/4, ಕೇರಳ 248, 115

ಹಿಮಾಚಲ ಪ್ರದೇಶಕ್ಕೆ 6 ವಿಕೆಟ್‌ಗಳ ಜಯ

ರೋಹ್ಟಕ್: ಮಧ್ಯಪ್ರದೇಶ 247, 26/1,, ಪಂಜಾಬ್ 378, 175/9 ಡಿಕ್ಲೇರ್.

ಮುಂಬೈ: ದಿಲ್ಲಿ 376/5, ಮಹಾರಾಷ್ಟ್ರ 635/2 ಡಿಕ್ಲೇರ್ ಹೈದರಾಬಾದ್: ಒಡಿಶಾ 228, 169, ಸೌರಾಷ್ಟ್ರ 186, 96/5

ಬಿಲಾಸ್‌ಪುರ: ತಮಿಳುನಾಡು 121, 452/8 ಡಿಕ್ಲೇರ್, ರೈಲ್ವೇಸ್ 173, 108/0

ಗುವಾಹಟಿ: ಸರ್ವಿಸಸ್ 233, ತ್ರಿಪುರಾ 275, 280/1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News