ನಾನು ತುಂಬ ದೇಶಪ್ರೇಮಿ,ಆದರೆ ಕಲಾವಿದರನ್ನು ಮಾತ್ರ ಗುರಿಯಾಗಿಸುವುದು ನ್ಯಾಯವಲ್ಲ: ಪ್ರಿಯಾಂಕಾ ಚೋಪ್ರಾ

Update: 2016-10-16 14:57 GMT

ನ್ಯೂಯಾರ್ಕ್,ಅ.16: ಭಾರತ ಮತ್ತು ಪಾಕಿಸ್ತಾನಗಳ ನಡುವೆ ಇತ್ತೀಚಿಗೆ ಸೃಷ್ಟಿಯಾಗಿರುವ ಉದ್ವಿಗ್ನತೆಯ ನಡುವೆ ಬಾಲಿವುಡ್‌ನಲ್ಲಿ ಪಾಕ್ ಕಲಾವಿದರ ಪರ-ವಿರುದ್ಧ ವಾಗ್ವಾದಗಳ ಹಿನ್ನೆಲೆಯಲ್ಲಿ ಖ್ಯಾತ ನಟಿ ಪ್ರಿಯಂಕಾ ಚೋಪ್ರಾ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಓರ್ವ ದೇಶಪ್ರೇಮಿಯಾಗಿ ಈ ವಿಷಯದಲ್ಲಿ ಸರಕಾರವು ತೆಗೆದು ಕೊಳ್ಳುವ ನಿರ್ಧಾರವನ್ನು ತಾನು ಗೌರವಿಸುತ್ತೇನೆ. ಆದರೆ ಕಲಾವಿದರನ್ನು ಮಾತ್ರ ಗುರಿಯಾಗಿಸಿಕೊಂಡು ಏಕೆ ದಾಳಿ ನಡೆಸಲಾಗುತ್ತದೆ ಎನ್ನುವುದು ತನ್ನ ಪ್ರಶ್ನೆಯಾಗಿದೆ ಎಂದಿದ್ದಾರೆ.

ದೇಶದಲ್ಲಿ ಯಾವುದೇ ಬೃಹತ್ ರಾಜಕೀಯ ಅಜೆಂಡಾ ಎದುರಾದಾಗಲೆಲ್ಲ ಎಲ್ಲಕ್ಕೂ ಮೊದಲು ಕಲಾವಿದರು ಮತ್ತು ನಟನಟಿಯರನ್ನು ಹೊಣೆಗಾರರನ್ನಾಗಿಸಲಾಗುತ್ತದೆ. ಅದೇ ಉದ್ಯಮಿಗಳು,ರಾಜಕಾರಣಿಗಳು,ವೈದ್ಯರು ಮತ್ತು ಸಾರ್ವಜನಿಕರನ್ನು ಹೊರತುಪಡಿಸಿ ಚಲನಚಿತ್ರ ರಂಗದಲ್ಲಿಲ್ಲದ ಇತರ ಯಾರನ್ನಾದರೂ ಏಕೆ ಹೊಣೆಯಾಗಿಸಲಾಗುತ್ತಿಲ್ಲ ಎಂದು ಆಂಗ್ಲ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಿದ್ದ ಪ್ರಿಯಾಂಕಾ ಪ್ರಶ್ನಿಸಿದರು.

ಪ್ರಸ್ತುತ ಪ್ರಿಯಾಂಕಾ ಜನಪ್ರಿಯ ಅಮೆರಿಕನ್ ಟಿವಿ ಧಾರಾವಾಹಿ ‘ಕ್ವಾಂಟಿಕೋ’ದಲ್ಲಿ ಮುಖ್ಯ ಪಾತ್ರದಲ್ಲಿ ನಟಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News