ಶಾಂೈ ಮಾಸ್ಟರ್ಸ್‌: ಆ್ಯಂಡಿ ಮರ್ರೆ ಚಾಂಪಿಯನ್

Update: 2016-10-16 17:53 GMT

ಶಾಂೈ, ಅ.16: ರಾಬರ್ಟೊ ಬಟಿಸ್ಟಾರನ್ನು ನೇರ ಸೆಟ್‌ಗಳ ಅಂತರದಿಂದ ಸೋಲಿಸಿರುವ ಬ್ರಿಟನ್ ಆಟಗಾರ ಆ್ಯಂಡಿ ಮರ್ರೆ ಶಾಂೈ ಮಾಸ್ಟರ್ಸ್‌ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು.

 ರವಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಂಬಲ್ಡನ್ ಹಾಗೂ ಒಲಿಂಪಿಕ್ಸ್ ಚಾಂಪಿಯನ್ ಮರ್ರೆ ಒಂದೂ ಸೆಟ್‌ನ್ನು ಕಳೆದುಕೊಳ್ಳದೇ ಬಟಿಸ್ಟಾ ವಿರುದ್ಧ 7-6(7/1), 6-1 ಅಂತರದಿಂದ ಜಯ ಸಾಧಿಸಿದ್ದಾರೆ. ಈ ಮೂಲಕ ಮೂರನೆ ಬಾರಿ ಶಾಂೈ ಓಪನ್ ಪ್ರಶಸ್ತಿಯನ್ನು ವಶಪಡಿಸಿಕೊಂಡರು.

ದ್ವಿತೀಯ ರ್ಯಾಂಕಿನ ಮರ್ರೆ ಸತತ 10 ಪಂದ್ಯಗಳಲ್ಲಿ ಅಜೇಯವಾಗುಳಿದಿದ್ದು ಸತತ 20 ಸೆಟ್‌ಗಳನ್ನು ಗೆದ್ದುಕೊಂಡಿದ್ದಾರೆ. ಕಳೆದ ವಾರ ಬೀಜಿಂಗ್‌ನಲ್ಲಿ ಚೀನಾ ಓಪನ್ ಪ್ರಶಸ್ತಿಯನ್ನು ಜಯಿಸಿದ್ದ ಮರ್ರೆ ಚೀನಾದಲ್ಲಿ ಸತತ 2ನೆ ಪ್ರಶಸ್ತಿ ಗೆದ್ದುಕೊಂಡರು.

ಕಳೆದ ಕೆಲವು ತಿಂಗಳಿಂದ ನಾನು ಎಲ್ಲ ಟೂರ್ನಿಗಳಲ್ಲಿ ಉತ್ತಮವಾಗಿ ಆಡುತ್ತಿದ್ದು, ಮತ್ತೊಮ್ಮೆ ಫೈನಲ್‌ಗೆ ತಲುಪಿರುವುದಕ್ಕೆ ಸಂತೋಷವಾಗುತ್ತಿದೆ ಎಂದು 2010 ಹಾಗೂ 2011ರಲ್ಲಿ ಶಾಂೈ ಓಪನ್ ಪ್ರಶಸ್ತಿ ಜಯಿಸಿದ್ದ ಮರ್ರೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News