×
Ad

ಕಬಡ್ಡಿ ವಿಶ್ವಕಪ್: ಕೊರಿಯಾ, ಭಾರತ ಸೆಮಿಫೈನಲ್‌ಗೆ

Update: 2016-10-16 23:53 IST

ಅಹ್ಮದಾಬಾದ್, ಅ.16: ಇಲ್ಲಿ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್‌ನ ‘ಎ’ ಗುಂಪಿನಲ್ಲಿ ದಕ್ಷಿಣ ಕೊರಿಯಾ ಮತ್ತು ಭಾರತ ಪ್ರಥಮ ಮತ್ತು ದ್ವಿತೀಯ ಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ.

 ದಕ್ಷಿಣ ಕೊರಿಯಾ ತಂಡ ಇಂದು ಇಂಗ್ಲೆಂಡ್‌ನ್ನು 39 ಪಾಯಿಂಟ್‌ಗಳ ಅಂತರದಿಂದ ಸೋಲಿಸುವುದರೊಂದಿಗೆ ಸತತ ಐದು ಪಂದ್ಯಗಳಲ್ಲಿ ಜಯಿಸಿ 25 ಅಂಕಗಳೊಂದಿಗೆ ಅಜೇಯವಾಗಿ ಸೆಮಿಫೈನಲ್ ತಲುಪಿದೆ. ಇಂದಿನ ಪಂದ್ಯದಲ್ಲಿ ಕೊರಿಯಾ 56 ಪಾಯಿಂಟ್ ಮತ್ತು ಇಂಗ್ಲೆಂಡ್ 17 ಪಾಯಿಂಟ್ ಪಡೆಯಿತು.
ಭಾರತ ಈಗಾಗಲೇ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಜಯ ಗಳಿಸಿದೆ.ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಸೋಲು ಅನುಭವಿಸಿತ್ತು. 16 ಅಂಕಗಳನ್ನು ಪಡೆದಿರುವ ಭಾರತ ಅ.18ರಂದು ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ನ್ನು ಎದುರಿಸಲಿದೆ.
 ಬಿ’ ಗುಂಪಿನ ಪಂದ್ಯದಲ್ಲಿ ಇಂದು ಕೀನ್ಯಾ ತಂಡ ಜಪಾನ್‌ನ್ನು 21 ಪಾಯಿಂಟ್ ಅಂತರದಿಂದ ಮಣಿಸಿತು. ಕೀನ್ಯಾ 48 ಮತ್ತು ಜಪಾನ್ 27 ಪಾಯಿಂಟ್‌ಗಳನ್ನು ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News