ಬ್ರಹ್ಮಾವರ ಕೃಷಿಮೇಳ ಸಮಾರೋಪ

Update: 2016-10-16 18:35 GMT

ಬ್ರಹ್ಮಾವರ, ಅ.16: ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಳ್ಳ ಲಾದ ಎರಡು ದಿನಗಳ ಕೃಷಿ ಮೇಳವು ಇಂದು ಸಮಾಪನಗೊಂಡಿತು.
ಸಮಾರೋಪ ಸಮಾರಂಭದ ರೈತ ಮತ್ತು ವಿಜ್ಞಾನಿಗಳ ಮುಕ್ತ ಚರ್ಚೆ ಯಲ್ಲಿ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ರೈತರು ಇಂತಹ ಕೃಷಿ ಮೇಳಗಳ ಪ್ರಯೋಜನವನ್ನು ಪಡೆದು ಭಾರತವನ್ನು ಹಸಿವುಮುಕ್ತ ದೇಶ ವನ್ನಾಗಿ ಪರಿವರ್ತಿಸಬೇಕು ಎಂದರು.
 ಈ ಸಂದರ್ಭದಲ್ಲಿ ರೈತರು ಕೃಷಿಯಲ್ಲಿ ಸುಣ್ಣದ ಬಳಕೆ, ಬೆಳೆಗಳಿಗೆ ಕಾಡುಪ್ರಾಣಿ ಗಳಿಂದ ಆಗುತ್ತಿರುವ ತೊಂದರೆಗಳು ಮತ್ತು ಅವುಗಳ ನಿಯಂತ್ರಣಕ್ಕೆ ಯಂತ್ರೋಪಕರಣಗಳ ಆವಿಷ್ಕಾರ, ಭತ್ತದ ಬೆಂಬಲ ಬೆಲೆಯನ್ನು ನಿಗದಿ ಪಡಿಸುವಲ್ಲಿ ಆಗುವ ವಿಳಂಬ, ತೆಂಗಿನ ಬೆಳೆಗಾರರ ಸಂಘಕ್ಕೆ ಸಹಾಯಧನ ನೀಡುವ ವಿಚಾರದ ಕುರಿತು ಚರ್ಚೆ ಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಅಣಬೆ ಬೇಸಾಯದ ಕುರಿತ ತರಬೇತಿ, ಮಣ್ಣಿನ ಪರೀಕ್ಷೆ ಮತ್ತು ಬೆಳೆಗಳನ್ನು ಬಾಧಿಸುವ ರೋಗ ಹಾಗೂ ಕೀಟಗಳ ಕುರಿತ ವಿವರಗಳನ್ನು ವಿಜ್ಞಾನಿಗಳು ರೈತರಿಗೆ ನೀಡಿದರು.
ಇಂದು ನಡೆದ ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆ ಕುರಿತ ಮೊದಲ ವಿಚಾರ ಸಂಕಿರಣದ ಅಧ್ಯಕ್ಷತೆ ಯನ್ನು ಪ್ರಗತಿಪರ ರೈತ ಎಡ್ತಾಡಿ ಸತೀಶ್ ಕುಮಾರ್ ಶೆಟ್ಟಿ ವಹಿಸಿದ್ದರು. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನವೀನ್‌ಚಂದ್ರ ಜೈನ್, ಕೇಂದ್ರದ ವಿಜ್ಞಾನಿ ಡಾ.ಎಂ.ಶಂಕರ್, ಬೈಂದೂರಿನ ಕೃಷಿ ಪಂಡಿತ ತಿಮ್ಮಣ್ಣ ಹೆಗ್ಗಡೆ, ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಹನುಮಂತಪ್ಪ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಶಶಿಕಾಂತ್ ಕಾರಿಂಕರ್ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಡಾ.ಬಿ.ಧನಂಜಯ ವಂದಿಸಿದರು. ಕಾರ್ಯಕ್ರಮ ಸಹಾ ಯಕ ಡಾ.ಸಂಜಯ್ ಕ್ಯಾತಪ್ಪ ಕಾರ್ಯ ಕ್ರಮ ನಿರೂಪಿಸಿದರು. ‘ಲಾಭದಾಯಕ ಸಮಗ್ರ ಕೃಷಿ ಪದ್ಧತಿ’ ಕುರಿತ ಎರಡನೆ ಸಂಕಿರಣದ ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್ ವಹಿಸಿದ್ದರು.

ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಮಗದ್, ಶಿವಮೊಗ್ಗ ಕೃಷಿ ಮಹಾ ವಿದ್ಯಾಲಯದ ಪ್ರ್ರಾಧ್ಯಾಪಕ ಡಾ.ಎನ್. ಎಸ್.ಮಾವರ್‌ಕರ್ ಮಾತನಾ ಡಿದರು.
ಈ ಬಾರಿಯ ಕೃಷಿ ಮೇಳಕ್ಕೆ ಸುಮಾರು 50,000ಕ್ಕೂ ಅಧಿಕ ರೈತರು, ವಿದ್ಯಾರ್ಥಿಗಳು ಮತ್ತು ಮಹಿಳೆ ಯರು ಆಗಮಿಸಿ ಕೃಷಿ ಹಾಗೂ ಯಂತ್ರೋಪ ಕರಣಗಳ ಕುರಿತು ಹೆಚ್ಚಿನ ಹಿತಿಯನ್ನು ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News