ನಾಳೆ ವಿಶ್ವ ವೈದ್ಯಕೀಯ ನೀತಿಶಾಸ್ತ್ರ ದಿನಾಚರಣೆ

Update: 2016-10-17 18:16 GMT

ಮಂಗಳೂರು, ಅ.17: ವಿಶ್ವ ವೈದ್ಯಕೀಯ ನೀತಿಶಾಸ್ತ್ರ ದಿನಾಚರಣೆ ಅಂಗವಾಗಿ ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಅ.19ರಂದು ‘ಮಾನವ ಘನತೆ ಮತ್ತು ಮಾನವ ಹಕ್ಕುಗಳು’ ವಿಷಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘಟಕಿ ಡಾ. ಪ್ರಿನ್ಸಿ ಲೂಯಿಸ್ ಹೇಳಿದರು.
ಮಾನವ ಹಕ್ಕು ಕಾರ್ಯಕರ್ತ ಡಾ. ರವೀಂದ್ರನಾಥ ಶ್ಯಾನುಭಾಗ್ ಮತ್ತು ಎಸ್‌ಡಿಎಂ ಕಾನೂನು ಕಾಲೇಜು ಪ್ರಿನ್ಸಿಪಾಲ್ ಡಾ. ತಾರನಾಥ ಮುಖ್ಯ ಅತಿಥಿಗಳಾಗಿರುವರು. ಎಫ್‌ಎಂಸಿಐ ನಿರ್ದೇಶಕ ಫಾ. ಪ್ಯಾಟ್ರಿಕಲ್ ರೊಡ್ರಿಗಸ್ ಅಧ್ಯಕ್ಷತೆ ವಹಿಸುವರು ಎಂದು ಅವರು ಹೇಳಿದರು.ಾರ್ಯಕ್ರಮದ ಅಂಗವಾಗಿ ಅಂತರ್ ಕಾಲೇಜು ಪ್ರಬಂಧ, ಚರ್ಚಾಕೂಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.ಾಲೇಜಿನ ಡಾ.ನಾಗೇಶ್, ವಿದ್ಯಾರ್ಥಿ ಪ್ರತಿನಿಧಿಗಳಾದ ವಿನಾಲ್ ಹಾಗೂ ತಾರೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News