×
Ad

ಡಚ್ ಓಪನ್: ಅಜಯ್ ಜಯರಾಮ್‌ಗೆ ದ್ವಿತೀಯ ಸ್ಥಾನ

Update: 2016-10-17 23:56 IST

 ಹೊಸದಿಲ್ಲಿ, ಅ.17: ಭಾರತದ ಶಟ್ಲರ್ ಅಜಯ್ ಜಯರಾಮ್ ಡಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ. ಹ್ಯಾಟ್ರಿಕ್ ಪ್ರಶಸ್ತಿ ಪಡೆಯುವುದರಿಂದ ವಂಚಿತರಾಗಿದ್ದಾರೆ.

ಅಗ್ರ ಶ್ರೇಯಾಂಕದ ಜಯರಾಮ್ ರವಿವಾರ ನಡೆದ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಫೈನಲ್‌ನಲ್ಲಿ ಚೈನೀಸ್ ತೈಪೆಯಝು ವೀ ವಾಂಗ್ ವಿರುದ್ಧ 10-21, 21-17, 18-21 ನೇರ ಸೆಟ್‌ಗಳಿಂದ ಸೋತರು.

ಜಯರಾಮ್ 2014 ಹಾಗೂ 2015ರಲ್ಲಿ ಡಚ್ ಓಪನ್ ಟೂರ್ನಿಯನ್ನು ಗೆದ್ದುಕೊಂಡಿದ್ದರು.

ಮೊದಲ ಗೇಮ್‌ನಲ್ಲಿ ಕಳಪೆ ಆರಂಭ ಪಡೆದಿದ್ದ ಜಯರಾಮ್ ಪಂದ್ಯದುದ್ದಕ್ಕೂ ಹಿನ್ನಡೆ ಅನುಭವಿಸಿದರು. ಎರಡನೆ ಗೇಮ್‌ನಲ್ಲಿ ಉಭಯ ಆಟಗಾರರ ನಡುವೆ ತೀವ್ರ ಪೈಪೋಟಿ ಕಂಡು ಬಂದಿತು. ಒಂದು ಹಂತದಲ್ಲಿ 9-9ರಿಂದ ಟೈ ಆಗಿತ್ತು. ಅಂತಿಮವಾಗಿ ಜಯರಾಮ್ 21-17 ಅಂತರದಿಂದ 2ನೆ ಗೇಮ್ ಗೆದ್ದುಕೊಂಡರು.

ಮೂರನೆ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಜಯರಾಮ್ ಮತ್ತೊಮ್ಮೆ ಹಿನ್ನಡೆ ಅನುಭವಿಸಿದರು. 55 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಾಂಗ್ 3ನೆ ಗೇಮ್‌ನ್ನು 21-18 ಅಂತರದಿಂದ ರೋಚಕವಾಗಿ ಗೆದ್ದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News