ಎನ್‌ಐಟಿಕೆ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆ: ವಿದ್ಯಾದಾಯಿನಿ ಶಾಲಾ ವಿದ್ಯಾರ್ಥಿನಿಯರು ಪ್ರಥಮ

Update: 2016-10-18 05:36 GMT

ಮಂಗಳೂರು, ಅ.18: ಸುರತ್ಕಲ್‌ನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ವತಿಯಿಂದ ನಡೆದ ಇಂಜಿ ಕನೆಕ್ಟ್-2016 ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ಸುರತ್ಕಲ್ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯರಾದ ಅಶ್ವಿನಿ.ಪಿ.ಮತ್ತು ನಮಿತಾ.ಎನ್. ಪ್ರಥಮ ಸ್ಥಾನ ಪಡೆದಿದ್ದಾರೆ.

ಫ್ಲೈ ಓವರ್‌ನಲ್ಲಿ ಭಾರಿ ವಾಹನಗಳು ಸಂಚಾರದಿಂದ ಉಂಟಾಗುವ ಒತ್ತಡದ ಭಾರವನ್ನು ಬಳಸಿ ನೀರು ಪಂಪ್ ಮಾಡುವ ವಿಧಾನದ ಮಾದರಿಯನ್ನು ತಯಾರಿಸಿ ಇವರು ಸ್ಪರ್ಧೆಯಲ್ಲಿ ಪ್ರದರ್ಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News