3 ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣಕ್ಕೆ
Update: 2016-10-19 19:20 IST
ಬೈಕನೂರ್, ಅ. 19: ಇಬ್ಬರು ರಶ್ಯದ ಬಾಹ್ಯಾಕಾಶಯಾನಿಗಳು ಮತ್ತು ಓರ್ವ ನಾಸಾ ಗಗನಯಾತ್ರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಲು ಬುಧವಾರ ಸೋಯಝ್ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣ ಆರಂಭಿಸಿದ್ದಾರೆ.
ಬಾಹ್ಯಾಕಾಶ ನಿಲ್ದಾಣ ತಲುಪಲು ಅವರು ಎರಡು ದಿನಗಳ ಕಾಲ ಪ್ರಯಾಣಿಸಬೇಕಾಗಿದೆ.
ನಾಸಾದ ಶೇನ್ ಕಿಂಬ್ರೂ ಮತ್ತು ರಾಸ್ಕಾಸ್ಮಾಸ್‌ನ ಆ್ಯಂಡ್ರಿ ಬೊರಿಸೆಂಕೊ ಮತ್ತು ಸರ್ಗೀ ರೈಝಿಕೊವ್ ಕಝಕ್‌ಸ್ತಾನದ ಬೈಕನೂರು ಕಾಸ್ಮೋಡ್ರೋಮ್‌ನಿಂದ ಬಾಹ್ಯಾಕಾಶಕ್ಕೆ ನೆಗೆದರು.
ಅವರ ಬಾಹ್ಯಾಕಾಶ ಪ್ರಯಾಣ ತಾಂತ್ರಿಕ ಕಾರಣಗಳಿಗಾಗಿ ಒಂದು ತಿಂಗಳಷ್ಟು ವಿಳಂಬವಾಗಿತ್ತು.