×
Ad

ಬಿಲ್ ಕ್ಲಿಂಟನ್‌ರಿಂದ ಲೈಂಗಿಕ ದೌರ್ಜನ್ಯ: ಮಾಜಿ ಟಿವಿ ವರದಿಗಾರ್ತಿ ಆರೋಪ

Update: 2016-10-20 20:00 IST

ವಾಶಿಂಗ್ಟನ್, ಅ. 20: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅರ್ಕಾನ್ಸಸ್‌ನ ರಾಜ್ಯಪಾಲರಾಗಿದ್ದಾಗ 1980ರಲ್ಲಿ ತನ್ನ ಮೇಲೆ ಮೂರು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂಬುದಾಗಿ ಮಾಜಿ ಟಿವಿ ವರದಿಗಾರ್ತಿಯೊಬ್ಬರು ಬುಧವಾರ ಆರೋಪಿಸಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಗಳ ನಡುವಿನ ಮೂರನೆ ಹಾಗೂ ಕೊನೆಯ ಸಂವಾದ ನಡೆಯುವ ಕೆಲವೇ ಗಂಟೆಗಳ ಮೊದಲು, ಸ್ಥಳೀಯ ಅರ್ಕಾನ್ಸಸ್ ಟಿವಿ ಕೇಂದ್ರ ಕೆಎಲ್‌ಎಂಎನ್-ಟಿವಿಯ ಮಾಜಿ ವರದಿಗಾರ್ತಿ ಲೆಸ್ಲೀ ಮಿಲ್ವೀಯ ಆರೋಪದ ವೀಡಿಯೊ ತುಣುಕು ಡೊನಾಲ್ಡ್ ಟ್ರಂಪ್ ಪರವಾಗಿರುವ ವೆಬ್‌ಸೈಟ್ ‘ಬ್ರೈಟ್‌ಬಾರ್ಟ್.ಕಾಮ್’ನಲ್ಲಿ ಪ್ರಕಟವಾಗಿದೆ.

ಕ್ಲಿಂಟನ್ ಟಿವಿ ನಿಲಯಕ್ಕೆ ಮೂರು ಬಾರಿ ಭೇಟಿ ನೀಡಿ ಎಡಿಟಿಂಗ್ ಕೋಣೆಯಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News