ಮಹಿಳೆಯರನ್ನು ಗೌರವಿಸುತ್ತೇನೆ ಎಂದು ಟ್ರಂಪ್ ಹೇಳಿದಾಗ ಸಭಿಕರು ನಕ್ಕರು!
Update: 2016-10-20 20:15 IST
ಲಾಸ್ ವೇಗಸ್, ಅ. 20: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದಂದಿನಿಂದ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಮಹಿಳೆಯರನ್ನು ನೋಡುವ ರೀತಿಗೆ ಸಂಬಂಧಿಸಿ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುತ್ತಾ ಬಂದಿದ್ದಾರೆ.
ಮೂರನೆ ಅಧ್ಯಕ್ಷೀಯ ಅಭ್ಯರ್ಥಿಗಳ ಸಂವಾದದಲ್ಲೂ ಇದು ಅವರ ಬೆನ್ನು ಬಿಡಲಿಲ್ಲ. ತಾನು ಮಹಿಳೆಯರನ್ನು ಗೌರವಿಸುತ್ತೇನೆ ಎಂದು ಅವರು ಹೇಳಿದಾಗ, ಪ್ರೇಕ್ಷಕರು ಖೊಳ್ಳನೆ ನಕ್ಕರು!
ಆಗ ಸಂವಾದದ ನಿರೂಪಕರಾಗಿದ್ದ ಕ್ರಿಸ್ ವ್ಯಾಲೇಸ್ ಮಧ್ಯಪ್ರವೇಶಿಸಿ, ಸಭಿಕರು ಶಾಂತಿಯಿಂದ ಇರಬೇಕು ಎಂದು ಕೇಳಿಕೊಳ್ಳಬೇಕಾಯಿತು.