ಪುಣೆಯಲ್ಲಿ ಬೆಂಕಿ ದುರಂತ: ಐವರ ಸಾವು
Update: 2016-10-20 20:06 IST
ಪುಣೆ,ಅ.20: ಇಲ್ಲಿಯ ಚಕಾನ್ ನಗರದಲ್ಲಿರುವ ಹತ್ತಿ ಕಂಪೆನಿಯೊಂದರ ಗೋದಾಮಿನಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ.
ಸನ್ನಿ ಇಂಡಸ್ಟ್ರಿಯಲ್ ಸಂಸ್ಥೆಯ ಗೋದಾಮಿನಲ್ಲಿ ಬೆಳಿಗ್ಗೆ 10ರ ವೇಳೆಗೆ ಬೆಂಕಿ ಅನಾಹುತ ಸಂಭವಿಸಿದ್ದು ಗೋದಾಮಿನಲ್ಲಿದ್ದ ಹತ್ತಿ ಮತ್ತು ಬಟ್ಟೆಯ ಸಂಗ್ರಹಕ್ಕೆ ಬೆಂಕಿ ಹತ್ತಿಕೊಂಡು ಶೀಘ್ರ ವ್ಯಾಪಿಸಿತು. ಅಗ್ನಿಶಾಮಕ ದಳದ ಐದು ವಾಹನಗಳು ಬೆಂಕ ನಂದಿಸಲು ಕಾರ್ಯಾಚರಣೆ ನಡೆಸಿದವು. ಮೃತಪಟ್ಟವರೆಲ್ಲರೂ ಸಂಸ್ಥೆಯ ನೌಕರರು . ಇನ್ನುಳಿದ ನೌಕರರು ಪಾರಾಗಲು ಯಶಸ್ವಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.