ಸಿಂಧೂ ಒಪ್ಪಂದ : ಭಾರತಕ್ಕೆ ಪಾಕ್ ಎಚ್ಚರಿಕೆ
Update: 2016-10-20 21:16 IST
ಇಸ್ಲಾಮಾಬಾದ್, ಅ. 20: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತ ಉಲ್ಲಂಘಿಸಿದರೆ ‘‘ಸೂಕ್ತ ಕ್ರಮ’’ ತೆಗೆದುಕೊಳ್ಳುವುದಾಗಿ ಪಾಕಿಸ್ತಾನ ಗುರುವಾರ ಎಚ್ಚರಿಸಿದೆ ಹಾಗೂ ಪರಿಸ್ಥಿತಿಯನ್ನು ತಾನು ನಿಕಟವಾಗಿ ಗಮನಿಸುತ್ತಿರುವುದಾಗಿ ಹೇಳಿದೆ.
56 ವರ್ಷಗಳ ಹಳೆಯ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತ ಮರುಪರಿಶೀಲಿಸಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ವಿದೇಶ ಕಚೇರಿಯ ವಕ್ತಾರ ನಫೀಸ್ ಝಕಾರಿಯ ಈ ಪ್ರತಿಕ್ರಿಯೆ ನೀಡಿದ್ದಾರೆ ಎಂದು ರೇಡಿಯೊ ಪಾಕಿಸ್ತಾನ ಹೇಳಿದೆ.
ಕಾಶ್ಮೀರದಲ್ಲಿ ನಡೆಸಲಾಗುತ್ತಿರುವ ‘‘ದೌರ್ಜನ್ಯಗಳು ಮತ್ತು ಮಾನವಹಕ್ಕು ಉಲ್ಲಂಘನೆ’’ಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಭಾರತ ‘‘ಹತಾಶ ಪ್ರಯತ್ನ’’ಗಳನ್ನು ನಡೆಸುತ್ತಿದೆ ಎಂದು ಅವರು ಹೇಳಿದರು.