‘ಕನಕ ನಡೆಗೆ ಅನುಮತಿ ನೀಡಿದರೆ ನಮಗೂ ಕೊಡಿ’

Update: 2016-10-21 18:37 GMT

ಉಡುಪಿ, ಅ.21: ‘ಚಲೋ ಉಡುಪಿ’ ಸ್ವಾಭಿಮಾನಿ ಸಂಘರ್ಷ ಜಾಥಾಕ್ಕೆ ಪ್ರತಿ ಯಾಗಿ ನಮೋ ಬ್ರಿಗೇಡ್ ನಡೆಸಲು ಉದ್ದೇಶಿಸಿರುವ ಕನಕ ನಡೆ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು. ಅದಕ್ಕೆ ಅನುಮತಿ ನೀಡಿದರೆ ದಲಿತ ದಮನಿತರ ಸ್ವಾಭಿ ಮಾನಿ ಸಮಿತಿಯ ಸ್ವಾಭಿಮಾನಿ ನಡೆ ಕಾರ್ಯ ಕ್ರಮಕ್ಕೂ ಅವಕಾಶ ನೀಡಬೇಕು ಎಂದು ಸಮಿತಿ ಒತ್ತಾಯಿಸಿದೆ.
ಇಂದು ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ನಡೆದ ದಲಿತ ದಮ ನಿತರ ಸ್ವಾಭಿಮಾನಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ನಮಗೆ ಅವಕಾಶ ನೀಡದೆ ಕೇವಲ ಕನಕ ನಡೆಗೆ ಮಾತ್ರ ಅನುಮತಿ ನೀಡಿದರೆ ಹೋರಾಟ ಮುಂದುವರಿಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಸಂಬಂಧ ಶನಿವಾರ ಕೇಂದ್ರ ಸಮಿತಿಯ ಸಭೆ ಕರೆಯಲಾಗಿದ್ದು, ಅಲ್ಲಿ ತೆಗೆದುಕೊಳ್ಳುವ ನಿರ್ಧಾರದಂತೆ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಸಮಿತಿಯ ಪ್ರಮುಖರಾದ ಸುಂದರ್ ಮಾಸ್ತರ್, ಶ್ಯಾಮ್ ರಾಜ್ ಬಿರ್ತಿ, ಹುಸೈನ್ ಕೋಡಿಬೆಂಗ್ರೆ, ವಿಶ್ವನಾಥ ಪೇತ್ರಿ, ಮಂಜುನಾಥ ಬಾಳ್ಕುದ್ರು, ಪರಮೇಶ್ವರ ಉಪ್ಪೂರು, ಜಯನ್ ಮಲ್ಪೆ, ಸುಂದರ್ ಕಪ್ಪೆಟ್ಟು, ವಿಠಲ ತೊಟ್ಟಂ, ಸುರೇಶ್ ಬಿರ್ತಿ, ವಲೇರಿಯನ್ ಫೆರ್ನಾಂಡಿಸ್, ಲೂವಿಸ್ ಲೋಬೊ, ಶಂಭು ಸುವರ್ಣ, ಜಿ.ರಾಜಶೇಖರ್, ಫಣಿರಾಜ್, ದಿನಕರ ಬೆಂಗ್ರೆ, ಖತೀಬ್ ರಶೀದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News