ಕಾಸರಗೋಡು: ಬೇಕಾಬಿಟ್ಟಿ ರಸಗೊಬ್ಬರ, ಕೀಟನಾಶಕಗಳ ಮಾರಾಟಕ್ಕೆ ಬ್ರೇಕ್

Update: 2016-10-22 05:52 GMT

ಕಾಸರಗೋಡು, ಅ.22: ಸಾವಯವ ಜಿಲ್ಲೆಯಾಗುವತ್ತ ಸಾಗುತ್ತಿರುವ ಕಾಸರಗೋಡಿನಲ್ಲಿ ಕೀಟನಾಶಕ ಮಾರಾಟ ಕೇಂದ್ರಗಳಿಗೆ  ನಿಯಂತ್ರಣ ಜಾರಿಗೆ ತರಲಾಗುತ್ತಿದೆ.

ಈ ವರ್ಷದಿಂದ ಪರವಾನಿಗೆ ನವೀಕರಿಸುವ  ಸಂದರ್ಭದಲ್ಲಿ  ಹೊಸ ಬಂಧನೆಗಳನ್ನು  ನೀಡಲಾಗುತ್ತಿದೆ. ಹೊಸದಾಗಿ ರಸಗೊಬ್ಬರ - ಕೀಟ ನಾಶಕ ಡಿಪೋ ಗೆ ಪರವಾನನಿಗೆ  ಅರ್ಜಿ ಸಲ್ಲಿಸುವವರಿಗೂ ಹೊಸ ನಿಯಮಾವಳಿ ಅನ್ವಯವಾಗಲಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಕೃಷಿ ಇಲಾಖೆ 215  ರಸಗೊಬ್ಬರ - ಕೀಟನಾಶಕ ಮಾರಾಟ ಮಳಿಗೆಗೆ  ಪರವಾನಿಗೆ ನವೀಕರಿಸಿ ನೀಡಿತ್ತು.  166 ರಸಗೊಬ್ಬರ , 49 ಕೀಟನಾಶಕ ಡಿಪೋ ಇದರಲ್ಲಿ ಒಳಗೊಂಡಿತ್ತು.

ಈ ವರ್ಷದಿಂದ ನವೀಕರಣ ಸಂದರ್ಭದಲ್ಲಿ  ಹಳೆಯ ನಿಯಮಾವಳಿ ಅನ್ವಯವಾಗದು. ಹೊಸ ಮಾರಾಟ ಕೇಂದ್ರಕ್ಕೆ ಅರ್ಜಿ ಸಲ್ಲಿಸುವವರು   ಅಂಗೀಕೃತ ಶಿಕ್ಷಣ ಪಡೆದಿರಬೇಕು. ಬಿಎಸ್ಸಿ , ಕೆಮೆಸ್ಟ್ರಿ , ಅಗ್ರಿಕಲ್ಚರ್  ಮೊದಲಾದ ಅರ್ಹತೆ ಪಡೆದಿರಬೇಕು. ಇದನ್ನು ಕಡ್ಡಾಯಗೊಳಿಸಲಾಗಿದೆ.

ಡಿಪೋ ದಲ್ಲಿ ಯಾವ ವಿಧದ  ಕೀಟನಾಶಕ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಕೃಷಿ ಅಧಿಕಾರಿ ಧ್ರಡೀಕರಿಸಬೇಕು. ಗ್ರಾಮ ಪಂಚಾಯತ್ ನ ಅನುಮತಿ ಅಗತ್ಯ. ಗ್ರಾಮ ಪಂಚಾಯತ್ ನ ಅನುಮತಿ ಇಲ್ಲದಿದ್ದಲ್ಲಿ   ಕೃಷಿ ಅಧಿಕಾರಿಯ ಅನುಮತಿ ಪತ್ರ ಲಭಿಸದು. ಸಂಪೂರ್ಣ   ಸಾವಯವ ಜಿಲ್ಲೆಯನ್ನಾಗಿ ಜಿಲ್ಲೆಯನ್ನು ಘೋಷಿಸಿದ್ದರೂ ರಾಸಾಯನಿಕ ಕೀಟನಾಶಕ ಗಳ ಮಾರಾಟ ಕೇಂದ್ರಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ . ಹೀಗಾಗಿ ನಿಬಂಧನೆಗಳ ಮೂಲಕ ಮಾರಾಟ ಕೇಂದ್ರಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ಹೆಜ್ಜೆ ಇರಿಸಿದ್ದಾರೆ.

2012ರಲ್ಲಿ 37 ಕೀಟನಾಶಕ  ಮಾರಾಟ ಕೇಂದ್ರಗಳಿಗೆ  ಪರವಾನಿಗೆ ನೀಡಲಾಗಿತ್ತು. 23 ಕಾರ್ಯಾಚರಿಸಿದ್ದವು. 2013ರಲ್ಲಿ  39 ಕೀಟನಾಶಕ, 75 ರಸ ಗೊಬ್ಬರ ಮಾರಾಟ ಕೇಂದ್ರಕ್ಕೆ ಅನುಮತಿ ನೀಡಲಾಗಿತ್ತು. 2014ರಲ್ಲಿ 30 ಕೀಟ ನಾಶಕ, 72 ರಸಗೊಬ್ಬರ  ಕೇಂದ್ರಕ್ಕೆ ಅನುಮತಿ ನೀಡಲಾಯಿಯಿತು. 2015ರಲ್ಲಿ 32 ಕೀಟನಾಶಕ ಮಾರಾಟ ಕೇಂದ್ರಕ್ಕೆ ಅನುಮತಿ ನೀಡಲಾಗಿತ್ತು. 

ಜಿಲ್ಲೆಯನ್ನು ಸಂಪೂರ್ಣ ಸಾವಯವ  ಜಿಲ್ಲೆಯನ್ನಾಗಿ ಪರಿವರ್ತಿಸುವ ಹಿನ್ನಲೆಯಲ್ಲಿ  ಕಡು ಕೆಂಪು  ಲೇಬಲ್ ಗಳ ಲ್ಲಿರುವ ಕೀಟನಾಶಕ  ಗಳ ತಯಾರಿ ಮಾರಾಟಕ್ಕೆ 2010ರ  ಡಿಸೆ೦ಬರ್ 2ರಿಂದ ನಿಷೇಧ  ಹೇರಲಾಗಿದೆ. ನೀಲಿ, ಹಸಿರು ಲೇಬಲ್ ಹೊಂದಿರುವ ಕೀಟನಾಶಕವನ್ನು ಈಗ ಬಳಸಲಾಗುತ್ತಿದೆ. ಆದರೆ ಸಂಪೂರ್ಣ ಸಾವಯವ ಜಿಲ್ಲೆಯನ್ನಾಗಿ  ಘೋಷಿಸಿದ್ದರೂ ರಾಸಾಯನಿಕ  ಕೀಟನಾಶಕ  ಮಾರಾಟಕ್ಕೆ ಕಡಿವಾಣ ಬಿದ್ದಿಲ್ಲ. ಹೀಗಾಗಿ ಹಲವು ನಿಬಂಧನೆಗಳನ್ನು ಇಲಾಖೆ ಜಾರಿಗೆ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News