ಅಗ್ಗದ ಬೆಲೆಗೆ ವಿಮಾನ ಟಿಕೆಟ್ ಪಡೆಯುವುದು ಹೇಗೆ?
ಅಗ್ಗದ ಬೆಲೆಗೆ ವಿಮಾನದ ಟಿಕೆಟ್ ಪಡೆಯುವುದು ಈಗ ದೊಡ್ಡ ಕಲೆಯೇನೂ ಅಲ್ಲ. ವೆಬ್‌ತಾಣಗಳು ಬೆಲೆಗಳನ್ನು ನಿತ್ಯವೂ ಊಹಿಸುವ ಕಾರಣದಿಂದ ಮತ್ತು ಆನ್‌ಲೈನಲ್ಲಿ ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿವರಗಳು ಇರುವುದರಿಂದ ಅಗ್ಗಕ್ಕೆ ಟಿಕೆಟ್ ಖರೀದಿಸಬಹುದು. ಆದರೆ ಈ ಎಲ್ಲಾ ಕಾರ್ಯತಂತ್ರಗಳು ಸರಳ ಸತ್ಯವನ್ನು ಹೊರಗಿಡುತ್ತವೆ. "ಕೆಲವೇ ಮಂದಿ ಪ್ರಯಾಣಿಸುವ ಸಂದರ್ಭದಲ್ಲಿ ಟಿಕೆಟುಗಳು ಅಗ್ಗವಾಗಿರುತ್ತವೆ" ಎನ್ನುತ್ತಾರೆ ಅಮೆರಿಕನ್ ಏರ್‌ಲೈನ್ಸ್ ವ್ಯವಸ್ಥಾಪಕ ನಿರ್ದೇಶಕ ಟಿಮ್ ಲಿಯಾನ್.
ರಜೆಗಳಂದು ಪ್ರಯಾಣಿಸದೆ ವಾರದ ಮಧ್ಯದಲ್ಲಿ ವಿಮಾನ ಪ್ರಯಾಣ ಮಾಡುವುದು ಮತ್ತು ರಜಾ ಸೀಸನ್‌ಗಳಲ್ಲದ ಸಮಯದಲ್ಲಿ ಪ್ರಯಾಣಿಸುವುದು ಬೆಲೆಯನ್ನು ತಗ್ಗಿಸಲಿದೆ. ಅಲ್ಲದೆ ನೀವೆಷ್ಟು ಮೊದಲು ಮುಂಗಡ ಬುಕಿಂಗ್ ಮಾಡಿದ್ದೀರಿ ಎನ್ನುವುದೂ ಮುಖ್ಯವಾಗುತ್ತದೆ. ಆದರೆ ವೈಮಾನಿಕ ಅಧಿಕಾರಿಗಳು ಯಾವತ್ತೂ ಇಂಥಾ ನೇರ ಸಲಹೆಗಳನ್ನು ನೀಡುವುದೇ ಇಲ್ಲ.
ಮುಖ್ಯವಾಗಿ ಒಂದು ದಾರಿಯಲ್ಲಿ ಪ್ರಯಾಣಿಸಲು ಪ್ರಯಾಣಿಕರು ಎಷ್ಟು ಬೇಡಿಕೆ ಇಟ್ಟಿದ್ದಾರೆ ಎನ್ನುವುದರ ಮೇಲೆ ಟಿಕೆಟು ಬೆಲೆ ನಿರ್ಧರಿತವಾಗುತ್ತದೆ. ವೈಮಾನಿಕ ವೇಳಾಪಟ್ಟಿಗಳನ್ನು ಧೀರ್ಘಕಾಲೀನ ಲೆಕ್ಕಾಚಾರದ ಮೇಲೆ ನಿರ್ಧರಿಸಿರಲಾಗುತ್ತದೆ. ತಿಂಗಳುಗಳು ಮೊದಲೇ ಇವು ಸಿದ್ಧವಾಗುತ್ತವೆ. ಹೀಗಾಗಿ ದರಗಳು ಹೆಚ್ಚು ಫ್ಲೆಕ್ಸಿಬಲ್ ಆಗಿ ಏನೂ ಇರುವುದಿಲ್ಲ. ಸಾಮಾನ್ಯವಾಗಿ ಫಿಕ್ಸ್ ಆಗಿರುವ ವೆಚ್ಚವೇ ಇರುತ್ತದೆ. ಆದರೆ ದಿನದಲ್ಲಿ ಹಲವು ಬಾರಿ ಟಿಕೆಟು ಬೆಲೆ ಬದಲಾಗಬಹುದು. ಒಂದು ನಿರ್ದಿಷ್ಟ ದಾರಿಯಲ್ಲಿ ಪ್ರಯಾಣಿಸಲು ಬೇಡಿಕೆ ಎಷ್ಟಿದೆ ಎನ್ನುವುದು ಆದರಿಸಿ, ಖಾಲಿ ಸೀಟುಗಳಿದ್ದಲ್ಲಿ ಬೆಲೆ ತಗ್ಗುವ ಸಾಧ್ಯತೆಯೂ ಇದೆ.
ಅಂತಿಮವಾಗಿ ಎಷ್ಟು ಸೀಟುಗಳು ಬುಕ್ ಆಗಿ ವಿಮಾನ ಹಾರುತ್ತದೆ ಎನ್ನುವುದು ಮುಖ್ಯ. ವೆಚ್ಚ ಎಷ್ಟೇ ಇದ್ದರೂ ನಿಮ್ಮ ಆದಾಯದ ಬಹುಭಾಗವನ್ನು ಟಿಕೆಟಿನ ಮೇಲೆ ಹಾಕುವಂತೆ ಮಾಡುವುದು ವಿಮಾನ ಸಂಸ್ಥೆಗಳ ಕಾರ್ಯತಂತ್ರವಾಗಿರುತ್ತದೆ. ಈ ಸಲಹೆಯು ಹಲವು ಆನ್‌ಲೈನ್ ಪ್ರಯಾಣ ಏಜೆಂಟರು ಇತ್ತೀಚೆಗೆ ಪ್ರಾಯೋಜಿಸುವುದರ ವಿರುದ್ಧವಾಗಿರುತ್ತದೆ. ಕಯಾಕ್, ಸ್ಕೈ ಸ್ಕಾನರ್, ಚೀಫ್ ಏರ್ ಎಲ್ಲವೂ ಮುಂಗಡವಾಗಿ ಟಿಕೆಟು ಖರೀದಿಸಲು ಸಲಹೆ ನೀಡುತ್ತವೆ. ಆದರೆ ಪ್ರಯಾಣಕ್ಕೆ ಮೊದಲೂ ಟಿಕೆಟ್ ಬೆಲೆ ತಗ್ಗುತ್ತದೆ. ಇದು ಬಹಳ ಸರಳ ವಿಧಾನವಾಗಿದೆ.
ಕೃಪೆ:qz.com