ಅಸಹಿಷ್ಣುತೆ ತಡವಾಗಿ ಕಂಡುಕೊಂಡ ಶಾಪ: ಟಾಟಾ

Update: 2016-10-23 08:12 GMT

ಗ್ವಾಲಿಯರ್, ಅ.23: ದೇಶದಲ್ಲಿ ಅಸಹಿಷ್ಣುತೆ ನಾವು ತಡವಾಗಿ ಕಂಡುಕೊಂಡ ಶಾಪ ಎಂದು ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಹೇಳಿದ್ದಾರೆ.

"ಈ ಅಸಹಿಷ್ಣುತೆ ಎಲ್ಲಿಂದ ಬರುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ದೇಶದ ಸಾವಿರಾರು, ಲಕ್ಷಾಂತರ ಜನರ ನಿರೀಕ್ಷೆಯಂತೆ ಅಸಹಿಷ್ಣುತೆ ಇಲ್ಲದ ಭಾರತ ನಿರ್ಮಾಣವಾಗಬೇಕು" ಎಂದು ಅವರು ಹೇಳಿದರು.

ಗ್ವಾಲಿಯರ್ ಸಿಂಧಿಯಾ ಶಾಲೆಯ 119ನೆ ಸಂಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಸಂಬಂಧ ಜ್ಯೋತಿರಾಧಿತ್ಯ ಸಿಂಧ್ಯಾ ಅವರ ಹೇಳಿಕೆಗೆ ಬೆಂಬಲ ಸೂಚಿಸಿದರು.

"ಮಹಾರಾಜ (ಜ್ಯೋತಿರಾದಿತ್ಯ) ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದಾರೆ. ಇದು ನಮಗೆ ತಡವಾಗಿ ಕಂಡುಬಂದ ಶಾಪ" ಎಂದು ಸ್ಪಷ್ಟಪಡಿಸಿದರು. "ನಮ್ಮ ಜತೆ ಸಹಬಾಳ್ವೆ ಮಾಡುವವರನ್ನು ನಾವು ಪ್ರೀತಿಸುವಂತಾಗಬೇಕು. ಅವರನ್ನು ಗುಂಡುಹೊಡೆದು ಕೊಲ್ಲುವುದಲ್ಲ. ಅವರನ್ನು ದ್ವೇಷಭಾವನೆಯಿಂದ ಕಾಣಬಾರದು. ಪರಸ್ಪರ ಕೊಡು- ಕೊಳ್ಳುವಿಕೆ ಇರಬೇಕು" ಎಂದು ಟಾಟಾ ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಜ್ಯೋತಿರಾದಿತ್ಯ ಸಿಂಧಿಯಾ ಅವರು, "ನಾವು ಗೆಲ್ಲುವ ಜತೆಗೆ ಚಿಂತಕರಾಗಿಯೂ ಬದುಕಬೇಕು. ಚರ್ಚೆ, ವಾದ ಹಾಗೂ ತರ್ಕವನ್ನು ಒಳಗೊಂಡದ್ದು ನಾಗರಿಕ ಸಮಾಜ ಎನ್ನುವುದು ನಮ್ಮ ಪರಿಕಲ್ಪನೆ" ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News