×
Ad

ಪಾಕಿಸ್ತಾನದಿಂದ ಸಾಧ್ಯವಾಗದಿದ್ದರೆ ಭಯೋತ್ಪಾದಕ ಕೇಂದ್ರಗಳನ್ನು ನಾವು ನಾಶಪಡಿಸುತ್ತೇವೆ: ಅಮೆರಿಕ

Update: 2016-10-23 14:30 IST

ವಾಷಿಂಗ್ಟನ್, ಅಕ್ಟೋಬರ್ 23: ಭಯೋತ್ಪಾದಕರುಮತ್ತು ಭಯೋತ್ಪಾದಕ ಕೇಂದ್ರಗಳ ಬಗ್ಗೆ ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಐಎಸ್‌ಐ(ಇಂಟರ್ ಸರ್ವೀಸ್ ಇಂಟಲಿಜೆನ್ಸ್) ತಳೆದಿರುವ ಮೃದು ಧೋರಣೆಯ ವಿರುದ್ಧ ಅಮೆರಿಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ ಎಂದುವರದಿಯಾಗಿದೆ. ಭಯೋತ್ಪಾದಕರಿಗೆ ಆರ್ಥಿಕ ಸಹಾಯವನ್ನು ಲಭ್ಯಗೊಳಿಸುವ ಕೇಂದ್ರಗಳ ವಿರುದ್ಧ ಕಾರ್ಯಾಚರಿಸುವ(ಕೌಂಟರಿಂಗ್ ದ ಫೈನಾನ್ಸಿಂಗ್ ಆಫ್ ಟೆರರಿಸಂ) ಆ್ಯಕ್ಟಿಂಗ್ ಅಂಡರ್ ಸೆಕ್ರಟರಿ ಆಡಂ ಸುಬಿನ್ ಪಾಕಿಸ್ತಾನದ ವಿರುದ್ಧ ಈ ರೀತಿ ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧ ಐಎಸ್‌ಐ ನಿರ್ಲಕ್ಷ್ಯವಹಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ’ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಕೇಂದ್ರಗಳನ್ನು ನಾಶಪಡಿಸಲು ಎಲ್ಲ ನೆರವನ್ನು ನೀಡಲು ಅಮೆರಿಕ ಸಿದ್ಧ ಭಯೋತ್ಪಾದನೆಯಿಂದಿರುವ ಕೆಟ್ಟ ಪರಿಣಾಮಗಳನ್ನು ಪಾಕಿಸ್ತಾನದ ಜನರು ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿರುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News