ಸೆಲ್ಫಿಯಲ್ಲಿ ನೀವು 'ಒಂಥರಾ' ಕಾಣುವುದು ಏಕೆಂದರೆ?

Update: 2016-10-23 09:43 GMT

ಸೆಲ್ಫಿಗಳಲ್ಲಿ ಒಂಥರಾ ಕಾಣುವುದಕ್ಕೆ ಹಲವು ಕಾರಣಗಳಿವೆ. ಕೆಲವೊಮ್ಮೆ ನಿಮಗೆ ನಿಜವಾಗಿಯೂ ಒಂಥರಾ ಕಾಣುವ ಮುಖಗಳಿರುತ್ತವೆ. (ಹೀಗೆ ಹೇಳಿದ್ದಕ್ಕೆ ಕ್ಷಮೆಯಿರಲಿ). ಕೆಲವೊಮ್ಮೆ ಕೆಟ್ಟದಾಗಿ ಕಾಣುವುದೇ ಹೊಸ ಸೌಂದರ್ಯ ಪ್ರಕಾರ ಎಂದುಕೊಳ್ಳುವುದೂ ಕಾರಣವಾಗಿದೆ. ನ್ಯೂಯಾರ್ಕ್‌ಟೈಮ್ಸ್ ಸ್ಟೈಲ್ ವಿಭಾಗದ ಓದುಗ ಜಾಲತಾಣವೊಂದಕ್ಕೆ ಹಾಕಿದ ಸೆಲ್ಫೀ ಹೀಗಿದೆ. ಅದರ ಜೊತೆಗೆ ಆತ, "ನೀವು ಸೆಲ್ಲೋಫೈ ಆಗಿದ್ದೀರಾ? ಇದು ಅಂತರ್ಜಾಲದ ಹೊಸ ವಿಲಕ್ಷಣ ವಿಷಯ" ಎಂದು ಬರೆದಿದ್ದಾರೆ.

ಆದರೆ ದ ಅಟ್ಲಾಂಟಿಕ್‌ನ ನೋಲಾನ್ ಫೀನಿ ಹೇಳುವಂತೆ, ಸೆಲ್ಫೀಗಳಲ್ಲಿ ಸ್ವಲ್ಪ ವಿಭಿನ್ನವಾಗಿ ಕಾಣಲು ಬೇರೆ ಕಾರಣವೇ ಇದೆ. ಅದಕ್ಕೆ ವೈಜ್ಞಾನಿಕ ಕಾರಣವಿದೆ. ಮುಖ್ಯವಾಗಿ ಮೆದುಳಿನ ವಿಜ್ಞಾನ. ನಾವು ನಮ್ಮ ಮುಖವನ್ನು ಚೆನ್ನಾಗಿ ಗುರುತಿಸುತ್ತೇವೆ. ಏಕೆಂದರೆ ಕನ್ನಡಿಯಲ್ಲಿ ಅದು ಕಾಣಿಸುತ್ತದೆ. ಆದರೆ ಸೆಲ್ಫೀ ತೆಗೆಯುವಾಗ ನಮ್ಮ ಮುಖ ನಮಗೇ ಅಪರಿಚಿತವಾಗಿ ಕಾಣುತ್ತದೆ. ಏಕೆಂದರೆ ಅದು ನಮ್ಮನ್ನು ತಲೆಯ ಕೋನದಿಂದ ನೋಡುತ್ತದೆಯೇ ವಿನಾ ನಾವು ಕನ್ನಡಿಯಲ್ಲಿ ನೋಡುವ ನೇರ ಪ್ರತಿಬಿಂಬ ಇರುವುದಿಲ್ಲ. ಭಾವನಾತ್ಮಕವಾಗಿ ನಮ್ಮ ಮುಖವನ್ನು ಹೀಗೆ ನೋಡಿ ಅಭ್ಯಾಸವಿಲ್ಲದ ನಾವು ಅದು ವಿಭಿನ್ನವಾಗಿ ಕಾಣಿಸುತ್ತದೆ ಎಂದುಕೊಳ್ಳುತ್ತೇವೆ. ಕೆಲವೊಮ್ಮೆ ಸೆಲ್ಫೀಗಳನ್ನು ಗೊಂದಲ ಮತ್ತು ಹತಾಶೆಯಿಂದ ನೋಡುತ್ತೇವೆ.

ನಮ್ಮ ಅತೀ ಸಮೀಪ ರೇಂಜ್‌ನ ಕ್ಯಾಮರಾ ಫೋನ್ ಲೆನ್ಸ್ ನಮ್ಮ ಮುಖವನ್ನು ಸರಿಯಾಗಿ ತೋರಿಸದೆ ಇರುವಂತಹ ತಾಂತ್ರಿಕ ವಿಷಯವೂ ಕೆಲವೊಮ್ಮೆ ಕೆಲಸ ಮಾಡುತ್ತದೆ. ಆದರೆ ಸ್ವತಃ ಕಡಿವಾಣ ಹಾಕಲು ಸೆಲ್ಫೀ ಬೇಡ ಎಂದು ಹೇಳಬಹುದೇನೋ. ಕೆಲವರ ಪ್ರಕಾರ ಸೆಲ್ಫೀ ಜನರಿಗೆ ಹುಚ್ಚು ಹಿಡಿಸುತ್ತದೆ. ಇತರರ ಪ್ರಕಾರ ವಾಸ್ತವದಲ್ಲಿ ಸೆಲ್ಫೀಗಳು ಅವರಿಗೆ ತಮ್ಮ ಚರ್ಮದ ಬಗ್ಗೆ ಹೆಚ್ಚು ಹಿತಕರ ಭಾವನೆ ಕೊಡುತ್ತದೆ. ಏಕೆಂದರೆ ಹಲವು ಸಲ ಸೆಲ್ಫೀಯಲ್ಲಿ ಎಲ್ಲಾ ಕೋನದಲ್ಲಿ ಮುಖವನ್ನು ನೋಡುವುದು ಖುಷಿ ಕೊಡುತ್ತದೆ. ನಿಮ್ಮ ಕೂದಲು ಚೆನ್ನಾಗಿ ಕಾಣುತ್ತಿದ್ದಲ್ಲಿ ಇತರ ವಿಷಯಗಳ ಬಗ್ಗೆ ಯಾಕೆ ಗಮನಹರಿಸಬೇಕು ಎನ್ನುವ ಯೋಚನೆಯದು!

ಕೃಪೆ: time.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News