×
Ad

ಸೈನಿಕರನ್ನು ತಡೆಯಲು ಗಂಧಕದ ಗಣಿಗೆ ಬೆಂಕಿ ಕೊಟ್ಟ ಐಸಿಸ್ ಉಗ್ರರು

Update: 2016-10-23 20:57 IST

ಅರ್ಬಿಲ್ (ಇರಾಕ್), ಅ. 23: ಮೊಸುಲ್‌ನತ್ತ ನುಗ್ಗಿ ಬರುತ್ತಿರುವ ಇರಾಕ್ ನೇತೃತ್ವದ ಪಡೆಗಳನ್ನು ತಡೆಯುವುದಕ್ಕಾಗಿ ಐಸಿಸ್ ಭಯೋತ್ಪಾದಕರು ನಗರದ ಸಮೀಪವಿರುವ ಗಂಧಕದ ಗಣಿಗೆ ಬೆಂಕಿ ಕೊಟ್ಟಿದ್ದಾರೆ. ಇದರಿಂದಾಗಿ ಯುದ್ಧ ಭೂಮಿಯಲ್ಲಿ ವಿಷಾನಿಲಗಳ ಧೂಮ ಹರಡಿದ್ದು ನೂರಾರು ನಾಗರಿಕರು ಅಸ್ವಸ್ಥಗೊಂಡಿದ್ದಾರೆ ಹಾಗೂ ಇರಾಕ್ ಮತ್ತು ಅಮೆರಿಕದ ಸೈನಿಕರು ರಕ್ಷಣಾ ಮುಖವಾಡಗಳನ್ನು ಧರಿಸುತ್ತಿದ್ದಾರೆ ಎಂದು ಆರೋಗ್ಯ ಮತ್ತು ಸೇನಾ ಅಧಿಕಾರಿಗಳು ಶನಿವಾರ ತಿಳಿಸಿದರು.


ಮೊಸುಲ್‌ನ ಆಗ್ನೇಯಕ್ಕೆ 25 ಮೈಲಿ ದೂರದಲ್ಲಿರುವ ಮಿಶ್ರಖ್ ಗಂಧಕದ ಗಣಿಯ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಪರದಾಡುತ್ತಿದ್ದಾರೆ ಎಂದು ಇರಾಕ್ ಫೆಡರಲ್ ಪೊಲೀಸ್‌ನ ವಕ್ತಾರ ಕರ್ನಲ್ ಅಬ್ದುಲ್‌ರಹಮಾನ್ ಅಲ್-ಖಝಾಲಿ ಹೇಳಿದರು.


  ಭಯೋತ್ಪಾದಕರು ಈಗಾಗಲೇ ಇರಾಕ್ ಮತ್ತು ಅಮೆರಿಕನ್ ಸೈನಿಕರನ್ನು ತಡೆಯಲು ತೈಲ ಬಾವಿಗೆ ಬೆಂಕಿ ಕೊಡುವುದು, ಕಬ್ಬಿಣದ ಆವರಣದ ಕಾರುಬಾಂಬ್‌ಗಳನ್ನು ಸ್ಫೋಟಿಸುವುದು ಮತ್ತು ಡ್ರೋನ್‌ಗಳನ್ನು ಸ್ಫೋಟಿಸುವುದು ಮುಂತಾದ ಅಸಾಂಪ್ರದಾಯಿಕ ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಈಗ ಗಂಧಕದ ಮಾರಕ ಹೊಗೆಯೂ ಈ ಪಟ್ಟಿಗೆ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News