×
Ad

ಮೊಹಾಲಿಯಲ್ಲಿ ಕಿವೀಸ್‌ನ ಕಿವಿ ಹಿಂಡಿದ ಕೊಹ್ಲಿ

Update: 2016-10-23 21:26 IST

   ಮೊಹಾಲಿ, ಅ.23: ನ್ಯೂಝಿಲೆಂಡ್ ವಿರುದ್ಧ ಮೂರನೆ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.

  ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 286 ರನ್‌ಗಳ ಸವಾಲನ್ನು ಪಡೆದ ಭಾರತ ಇನ್ನೂ 10ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್‌ಗಳ ನಷ್ಟದಲ್ಲಿ 289 ರನ್ ಗಳಿಸಿತು. ಇದರೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
      ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಉಪನಾಯಕ ವಿರಾಟ್ ಕೊಹ್ಲಿ ಮೂರನೆ ವಿಕೆಟ್‌ಗೆ ದಾಖಲಿಸಿದ 151 ರನ್‌ಗಳ ಜೊತೆಯಾಟದ ಸಹಾಯದಿಂದ ಭಾರತ ಸುಲಭವಾಗಿ ಗೆಲುವು ದಾಖಲಿಸಿತು.
 26ನೆ ಏಕದಿನ ಶತಕ ದಾಖಲಿಸಿದ ವಿರಾಟ್ ಕೊಹ್ಲಿ ಔಟಾಗದೆ 154 ರನ್(134ಎ, 16ಬೌ,1ಸಿ) ಮತ್ತು ಮನೀಷ್ ಪಾಂಡೆ 28 ರನ್(34ಎ, 3ಬೌ) ಗಳಿಸಿ ಔಟಾಗದೆ ಉಳಿದರು. ನಾಯಕ ಎಂಎಸ್ ಧೋನಿ 80 ರನ್ (91ಎ, 6ಬೌ, 3ಸಿ)ಗಳಿಸಿ ಗೆಲುವಿಗೆ ಕೊಡುಗೆ ನೀಡಿದರು.

8.4 ಓವರ್‌ಗಳಲ್ಲಿ 41 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಧೋನಿ ಮತ್ತು ಕೊಹ್ಲಿ ರಕ್ಷಣೆ ನೀಡಿ ನ್ಯೂಝಿಲೆಂಡ್‌ನ ದಾಳಿಯನ್ನು ಪುಡಿ ಪುಡಿ ಮಾಡಿದರು. ಇಬ್ಬರು ಶತಕ ದಾಖಲಿಸಲು ಪೈಪೋಟಿ ನಡೆಸುವ ರೀತಿಯಲ್ಲಿ ಬ್ಯಾಟಿಂಗ್ ನಡೆಸಿದರು. ಆದರೆ ಧೋನಿ 35.5ನೆ ಓವರ್‌ನಲ್ಲಿ ಹೆನ್ರಿ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ರಾಸ್ ಟೇಲರ್‌ಗೆ ಕ್ಯಾಚ್ ನೀಡಿದರು. ಧೋನಿ 10ನೆ ಶತಕ ದಾಖಲಿಸುವ ಅವಕಾಶ ಕಳೆದುಕೊಂಡರು. ಆದರೆ 61ನೆ ಅರ್ಧಶತಕ ಗಳಿಸಿದರು.
  ವಿರಾಟ್ ಕೊಹ್ಲಿಗೆ ಬಳಿಕ ಮನೀಷ್ ಪಾಂಡೆ ಜೊತೆಯಾದರು.ಇವರು ನಾಲ್ಕನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 97 ರನ್‌ಗಳ ಕಾಣಿಕೆ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಭಾರತದ ಆರಂಭ ಚೆನ್ನಾಗಿರಲಿಲ್ಲ. 2.5 ಓವರ್‌ಗಳಲ್ಲಿ 13 ರನ್ ಗಳಿಸಿದ್ದಾಗ ಆರಂಭಿಕ ದಾಂಡಿಗ ಅಜಿಂಕ್ಯ ರಹಾನೆ (5) ಔಟಾಗಿದ್ದರು. ಭಾರತದ ಸ್ಕೋರ್ 8.4 ಓವರ್‌ಗಳಲ್ಲಿ 41ಕ್ಕೆ ತಲುಪುವಾಗ ಆರಂಭಿಕ ದಾಂಡಿಗ ರೋಹಿತ್ ಶರ್ಮ(13) ಅವರನ್ನು ಸೌಥಿ ಎಲ್‌ಬಿಡಬ್ಲು ಬಲೆಗೆ ಕೆಡವಿದರು.
ನ್ಯೂಝಿಲೆಂಡ್‌ನ ಮ್ಯಾಟ್ ಹೆನ್ರಿ 56ಕ್ಕೆ 2, ಮತ್ತು ಸೌಥಿ 55ಕ್ಕೆ 1 ವಿಕೆಟ್ ಪಡೆದರು.
ನ್ಯೂಝಿಲೆಂಡ್ 285ಕ್ಕೆ ಆಲೌಟ್: ಇದಕ್ಕೂ ಮೊದಲು ನ್ಯೂಝಿಲೆಂಡ್ ತಂಡ 49.4 ಓವರ್‌ಗಳಲ್ಲಿ 285 ರನ್‌ಗಳಿಗೆ ಆಲೌಟಾಗಿತ್ತು.
ಎರಡನೆ ಪಂದ್ಯದಲ್ಲಿ ಭಾರತದ ವಿರುದ್ಧ 6 ರನ್‌ಗಳ ರೋಚಕ ಜಯ ಗಳಿಸಿದ್ದ ನ್ಯೂಝಿಲೆಂಡ್ ಈ ಪಂದ್ಯದಲ್ಲಿ ಗೆಲುವಿನ ಪ್ರಯತ್ನ ನಡೆಸಿತ್ತು. ಭಾರತಕ್ಕೆ ಕಠಿಣ ಸವಾಲು ವಿಧಿಸಿತ್ತು.
 ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಝಿಲೆಂಡ್ ತಂಡಕ್ಕೆ ಆರಂಭಿಕ ದಾಂಡಿಗರಾದ ಮಾರ್ಟಿನ್ ಗಪ್ಟಿಲ್ ಮತ್ತು ಲಥಾಮ್ ಮೊದಲ ವಿಕೆಟ್‌ಗೆ 46 ರನ್‌ಗಳ ಜೊತೆಯಾಟ ನೀಡಿದರು. ಗಪ್ಟಿಲ್ 27 ರನ್ ಗಳಿಸಿದ್ದಾಗ ಅವರನ್ನು ಉಮೇಶ್ ಯಾದವ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಎರಡನೆ ವಿಕೆಟ್‌ಗೆ ಲಥಾಮ್‌ಗೆ ನಾಯಕ ವಿಲಿಯಮ್ಸ್ ಜೊತೆಯಾದರು. ವಿಲಿಯಮ್ಸ್‌ಗೆ ಕಳೆದ ಪಂದ್ಯದಲ್ಲಿ ಶತಕ ದಾಖಲಿಸಿದಂತೆ ಈ ಪಂದ್ಯದಲ್ಲಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ತಳವೂರಲು ಕೇದಾರ್ ಜಾಧವ್ ಅವಕಾಶ ನೀಡಲಿಲ್ಲ. ಹೀಗಿದ್ದರೂ ಅವರು 22 ರನ್ ಕೊಡುಗೆ ನೀಡಿದರು. ಲಥಾಮ್ 61 ರನ್(131ನಿ, 72ಎ, 3ಬೌ,1ಸಿ) ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಮೂರನೆ ವಿಕೆಟ್‌ಗೆ ಲಥಾಮ್ ಮತ್ತು ರಾಸ್ ಟೇಲರ್ ತಂಡಕ್ಕೆ ಉಪಯುಕ್ತ 73 ರನ್‌ಗಳ ಕೊಡುಗೆ ನೀಡಿದರು. ಟೇಲರ್ 44 ರನ್(57ಎ, 4ಬೌ,1ಸಿ) ಗಳಿಸಿದರು.
ಆ್ಯಂಡರ್ಸನ್ (6) ಮತ್ತು ರೊಂಚಿ(1) ವಿಫಲರಾದರು. ಈ ಹಂತದಲ್ಲಿ ನಿಶಮ್ ಕ್ರೀಸ್‌ಗೆ ಆಗಮಿಸಿದರು. ಸ್ಯಾಂಟ್ನೆರ್ 7ರನ್ ಮತ್ತು ಸೌಥಿ 13 ರನ್ ಗಳಿಸಿ ಪೆವಿಲಿಯನ್ ಸೇರಿದರು.
 37.5 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 199 ರನ್ ಗಳಿಸಿದ್ದಾಗ ನಿಶಮ್‌ಗೆ ಮ್ಯಾಟ್ ಹೆನ್ರಿ ಜೊತೆಯಾದರು. ಇವರು 9ನೆ ವಿಕೆಟ್‌ಗೆ ಜೊತೆಯಾಟದಲ್ಲಿ ಭಾರತದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. 84 ರನ್‌ಗಳನ್ನು ತಂಡದ ಖಾತೆಗೆ ಸೇರಿಸಿದರು. ನಿಶಮ್ ಮೊದಲ ಅರ್ಧಶತಕ ದಾಖಲಿಸಿದರು. 49ನೆ ಓವರ್‌ನ ಕೊನೆಯ ಎಸೆತದಲ್ಲಿ ಯಾದವ್ ಅವರು 57 ರನ್ (47ಎ, 7ಬೌ) ಗಳಿಸಿದ ನಿಶಮ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.
ಮ್ಯಾಟ್ ಹೆನ್ರಿ ಔಟಾಗದೆ 39 ರನ್(37ಎ, 4ಬೌ,1ಸಿ) ಗಳಿಸಿದ್ದಾರೆ.
ಭಾರತದ ಕೇದಾರ್ ಜಾಧವ್ 29ಕ್ಕೆ3, ಉಮೇಶ್ ಯಾದವ್ 75ಕ್ಕೆ 3, ಅಮಿತ್ ಮಿಶ್ರಾ 46ಕ್ಕೆ 2 ಮತ್ತು ಜಸ್‌ಪ್ರೀತ್ ಬುಮ್ರಾ 52ಕ್ಕೆ 2 ವಿಕೆಟ್ ಪಡೆದರು.

ಸ್ಕೋರ್ ವಿವರ

ನ್ಯೂಝಿಲೆಂಡ್: 49.4 ಓವರ್‌ಗಳಲ್ಲಿ 285 ರನ್‌ಗೆ ಆಲೌಟ್

ಗಪ್ಟಿಲ್ ಎಲ್‌ಬಿಡಬ್ಲು ಯಾದವ್ 27

ಲಥಾಮ್ ಸಿ ಪಾಂಡ್ಯ ಬಿ ಜಾಧವ್ 61

ವಿಲಿಯಮ್ಸನ್ ಎಲ್‌ಬಿಡಬ್ಲು ಜಾಧವ್ 22

ರಾಸ್ ಟೇಲರ್ ಸ್ಟಂ.ಧೋನಿ ಬಿ ಮಿಶ್ರಾ 44

ಆ್ಯಂಡರ್ಸನ್ ಸಿ ರಹಾನೆ ಬಿ ಜಾಧವ್ 06

ರೊಂಚಿ ಸ್ಟಂ.ಧೋನಿ ಬಿ ಮಿಶ್ರಾ 01

ನೀಶಮ್ ಸಿ ಜಾಧವ್ ಬಿ ಯಾದವ್ 57

ಸ್ಯಾಂಟ್ನರ್ ಸಿ ಕೊಹ್ಲಿ ಬಿ ಬುಮ್ರಾ 07

ಸೌಥಿ ಬಿ ಯಾದವ್ 13

ಹೆನ್ರಿ ಔಟಾಗದೆ 39

ಬೌಲ್ಟ್ ಬಿ ಬುಮ್ರಾ 01

ಇತರ 07

ವಿಕೆಟ್ ಪತನ: 1-46, 2-80, 3-153, 4-160, 5-161, 6-169, 7-180, 8-199, 9-283, 10-285.

ಬೌಲಿಂಗ್ ವಿವರ

ಉಮೇಶ್ ಯಾದವ್ 10-0-75-3

ಹಾರ್ದಿಕ್ ಪಾಂಡ್ಯ 5-0-34-0

ಬುಮ್ರಾ 9.4-0-52-2

ಕೇದಾರ್ ಜಾಧವ್ 5-0-29-3

ಅಕ್ಷರ್ ಪಟೇಲ್ 10-0-49-0

ಅಮಿತ್ ಮಿಶ್ರಾ 10-0-46-2

ಭಾರತ: 48.2 ಓವರ್‌ಗಳಲ್ಲಿ 289/3

ರೋಹಿತ್ ಶರ್ಮ ಎಲ್‌ಬಿಡಬ್ಲು ಸೌಥಿ 13

 ಅಜಿಂಕ್ಯ ರಹಾನೆ ಸಿ ಸ್ಯಾಂಟ್ನರ್ ಬಿ ಹೆನ್ರಿ 05

ವಿರಾಟ್ ಕೊಹ್ಲಿ ಅಜೇಯ 154

ಎಂಎಸ್ ಧೋನಿ ಸಿ ಟೇಲರ್ ಬಿ ಹೆನ್ರಿ 80

ಮನೀಶ್ ಪಾಂಡೆ ಔಟಾಗದೆ 28

ಇತರ 09

ವಿಕೆಟ್ ಪತನ: 1-13, 2-41

ಬೌಲಿಂಗ್ ವಿವರ:

ಹೆನ್ರಿ 9.2-0-56-2

ಬೌಲ್ಟ್ 10-0-73-0

ಸೌಥಿ 10-0-55-1

ಸ್ಯಾಂಟ್ನರ್ 10-0-43-0

ನೀಶಮ್ 9-0-60-0

ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News