ಈ ಅಂಚೆಕಾರ್ಡ್ ತಾನು ಸೇರಬೇಕಾದ ಸ್ಥಳವನ್ನು ಸೇರಲು ತೆಗೆದುಕೊಂಡ ವರ್ಷಗಳೆಷ್ಟು ಗೊತ್ತೇ ?
Update: 2016-10-23 21:32 IST
ಮೆಲ್ಬರ್ನ್, ಅ. 23: ಆಸ್ಟ್ರೇಲಿಯದಲ್ಲಿ ಅಂಚೆ ಕಾರ್ಡೊಂದು 50 ಸುದೀರ್ಘ ವರ್ಷಗಳ ಬಳಿಕ ತಾನು ಸೇರಬೇಕಾದ ಸ್ಥಳವನ್ನು ಸೇರಿದೆ. ಈ ಪ್ರಮಾಣದ ವಿಳಂಬಕ್ಕಾಗಿ ಅಂಚೆ ಕಚೇರಿಯು ಕ್ಷಮೆಯನ್ನೂ ಕೋರಿದೆ.
1966ನೆ ಇಸವಿಯ ‘ಕೊಂಚ ಮಾಸಿದ’ ಪೋಸ್ಟ್ ಕಾರ್ಡನ್ನು ಅಡಿಲೇಡ್‌ನ ದಂಪತಿ ಟಿಮ್ ಮತ್ತು ಕ್ಲೇರ್ ಡಫಿ ಸೋಮವಾರ ತಮ್ಮ ಲೆಟರ್‌ಬಾಕ್ಸ್‌ನಲ್ಲಿ ಕಂಡರು.
ಪತ್ರವನ್ನು ಫ್ರೆಂಚ್ ಪಾಲಿನೇಶ್ಯನ್ ದ್ವೀಪ ಟಹೀಟಿಯಲ್ಲಿರುವ ಪ್ಯಾಪೀಟ್ ಎಂಬ ಊರಿನಿಂದ ‘ಕ್ರಿಸ್’ ಎಂಬ ಹೆಸರಿನ ವ್ಯಕ್ತಿ 1966ರಲ್ಲಿ ಅಡಿಲೇಡ್‌ನ ನಿವಾಸಿ ರಾಬರ್ಟ್ ಜಿಯಾರ್ಗಿಯೊ ಎಂಬವರಿಗೆ ಕಳುಹಿಸಿದ್ದರು.
ಟಿಮ್ ಮತ್ತು ಕ್ಲೇರ್ ಡಫಿ 2015ರಲ್ಲಿ ಈ ಮನೆಯನ್ನು ಖರೀದಿಸಿದ್ದರು.
ತೇವಾಂಶಭರಿತ ವಾತಾವರಣದ ಹೊರತಾಗಿಯೂ ತಾನು ಸಂತೋಷದಿಂದಿದ್ದೇನೆ ಎಂಬುದಾಗಿ ಕ್ರಿಸ್ ಪತ್ರದಲ್ಲಿ ಬರೆದಿದ್ದರು.