×
Ad

ರಣಜಿ ಟ್ರೋಫಿ: ಗುಜರಾತ್ ವಿರುದ್ಧ ಹಳಿ ತಪ್ಪಿದ ರೈಲ್ವೇಸ್

Update: 2016-10-23 23:55 IST

ಲಾಹ್ಲಿ, ಅ.23: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಉತ್ತಮ ಫಾರ್ಮ್ ಮುಂದುವರಿಸಿದ ಗುಜರಾತ್ ತಂಡ ರೈಲ್ವೇಸ್ ತಂಡದ ವಿರುದ್ಧ 294 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.

ರಣಜಿಯ ‘ಎ’ ಗುಂಪಿನ ಪಂದ್ಯದಲ್ಲಿ ನಾಲ್ಕನೆ ಹಾಗೂ ಕೊನೆಯ ದಿನವಾದ ರವಿವಾರ ರೈಲ್ವೇಸ್ ತಂಡ 16.2 ಓವರ್‌ಗಳಲ್ಲಿ 35 ರನ್ ಗಳಿಸುವಷ್ಟರಲ್ಲಿ ಕೊನೆಯ ಆರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿತು. ರೈಲ್ವೇಸ್ ಗೆಲುವಿಗೆ 501 ರನ್ ಗಳಿಸಬೇಕಾಗಿತ್ತು. ಆದರೆ, ರೈಲ್ವೇಸ್ ಎರಡನೆ ಇನಿಂಗ್ಸ್‌ನಲ್ಲಿ 77.2 ಓವರ್‌ಗಳಲ್ಲಿ ಕೇವಲ 206 ರನ್ ಗಳಿಸಿತು.

  4 ವಿಕೆಟ್ ನಷ್ಟಕ್ಕೆ 171 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ರೈಲ್ವೇಸ್ ಪರ ಮಹೇಶ್ ರಾವತ್(54) ಹಾಗೂ ಎಎನ್ ಘೋಷ್(36) ಐದನೆ ವಿಕೆಟ್ ಜೊತೆಯಾಟದಲ್ಲಿ 85 ರನ್ ಸೇರಿಸಿದರು. ಆದರೆ, ಈ ಇಬ್ಬರು ಔಟಾದ ಬಳಿಕ ರೈಲ್ವೇಸ್ ಹಳಿ ತಪ್ಪಿತು.

ಈಶ್ವರ್ ಚೌಧರಿ(3-29), ರುಶ್ ಕಲಾರಿಯ(3-30) ಹಾಗೂ ಕರಣ್ ಪಟೇಲ್(3-94) ತಮ್ಮಳಗೆ 9 ವಿಕೆಟ್ ಹಂಚಿಕೊಂಡರು. ಈ ಗೆಲುವಿನ ಮೂಲಕ ಗುಜರಾತ್ ತಂಡ ಆರು ಅಂಕವನ್ನು ಗಳಿಸಿತು.

ರಣಜಿ 3ನೆ ಸುತ್ತಿನ ಫಲಿತಾಂಶ

ಮುಂಬೈ: ಜಮ್ಮು-ಕಾಶ್ಮೀರ 334, 111

ಆಂಧ್ರ 255, 194/6

ಆಂಧ್ರಕ್ಕೆ 4 ವಿಕೆಟ್‌ಗಳ ಜಯ

ಥುಂಬ: ವಿದರ್ಭ 416, ಅಸ್ಸಾಂ 227, 73/2, ಪಂದ್ಯ ಡ್ರಾ

ಬಿಲಾಸ್‌ಪುರ: ಬಂಗಾಳ 404, 226, ಪಂಜಾಬ್ 271,244

ಬಂಗಾಳಕ್ಕೆ 115 ರನ್ ಜಯ

ಗುವಾಹಟಿ: ಹರ್ಯಾಣ 178, 289, ಛತ್ತೀಸ್‌ಗಡ 189, 117

ಹರ್ಯಾಣಕ್ಕೆ 161 ರನ್ ಜಯ

ಕಟಕ್: ಗೋವಾ 606/6 ಡಿಕ್ಲೇರ್, ಸರ್ವಿಸಸ್ 279, 188/4, ಪಂದ್ಯ ಡ್ರಾ

ರೋಹ್ಟಕ್: ಗುಜರಾತ್ 187, 437/7 ಡಿಕ್ಲೇರ್, ರೈಲ್ವೇಸ್ 124,206

ಗುಜರಾತ್‌ಗೆ 294 ರನ್ ಜಯ

ಕಲ್ಯಾಣಿ: ತ್ರಿಪುರಾ 549, ಹಿಮಾಚಲ ಪ್ರದೇಶ 311, 348/5, ಪಂದ್ಯ ಡ್ರಾ

ಭುವನೇಶ್ವರ: ಕೇರಳ 517/9 ಡಿಕ್ಲೇರ್, ಹೈದರಾಬಾದ್: 281, 220/3, ಪಂದ್ಯ ಡ್ರಾ

ವಡೋದರ: ಜಾರ್ಖಂಡ್ 209, 277, ರಾಜಸ್ಥಾನ 207, 237

ಜಾರ್ಖಂಡ್‌ಗೆ 42 ರನ್ ಗೆಲುವು

ರಾಯ್‌ಪುರ: ಮಧ್ಯಪ್ರದೇಶ 445, ಮುಂಬೈ 568/7 ಡಿಕ್ಲೇರ್

ಪಂದ್ಯ ಡ್ರಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News